ಎ.ಎಸ್. ಪೊನ್ನಣ್ಣ ಹುಟ್ಟುಹಬ್ಬ: ವೃದ್ಧಾಶ್ರಮದಲ್ಲಿ ಪಿಯೂಷ್ ಪೆರೇರಾ ಕುಟುಂಬದಿಂದ ನಿರಾಶ್ರಿತರಿಗೆ 25 ಕಂಬಳಿ ವಿತರಣೆ
ವಿರಾಜಪೇಟೆ: ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಅವರ ಹುಟ್ಟುಹಬ್ಬವನ್ನು ಹಾಕತ್ತೂರು ಗ್ರಾಮ ಪಂಚಾಯತಿಯ ಮಾಜಿ ಸದಸ್ಯರು ಹಾಗೂ ವಲಯ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಪಿಯೂಷ್ ಪೆರೇರಾ ಹಾಗೂ ಅವರ ಕುಟುಂಬಸ್ಥರು ಅರ್ಥಪೂರ್ಣವಾಗಿ ಆಚರಿಸಿದರು.
ವಿರಾಜಪೇಟೆಯ ಆರ್ಜಿ ಗ್ರಾಮದ ಶಕ್ತಿ ವೃದ್ಧಾಶ್ರಮಕ್ಕೆ ಭೇಟಿ ನೀಡಿದ ಪಿಯೂಷ್ ಪೆರೇರಾ ಅವರು ವೃದ್ಧಾಶ್ರಮದ ನಿರಾಶ್ರಿತರಿಗೆ 25 ಕಂಬಳಿಗಳನ್ನು ವಿತರಿಸಿದರು. ವೃದ್ಧರೊಂದಿಗೆ ಸಮಯ ಕಳೆದು, ಅವರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಅವರ ಜನಸೇವಾ ಕಾರ್ಯಗಳನ್ನು ಸ್ಮರಿಸಿದ ಪಿಯೂಷ್ ಪೆರೇರಾ, "ಶಾಸಕರ ಜನ್ಮದಿನವನ್ನು ಸಮಾಜ ಸೇವೆಯ ಮೂಲಕ ಆಚರಿಸುವುದೇ ನಿಜವಾದ ಗೌರವ" ಎಂದು ತಿಳಿಸಿದರು. ವೃದ್ಧಾಶ್ರಮದ ನಿರ್ವಹಣಾ ಸಮಿತಿಯವರು ಪಿಯೂಷ್ ಪೆರೇರಾ ಕುಟುಂಬದ ಈ ಸಾಮಾಜಿಕ ಕಾಳಜಿಯನ್ನು ಶ್ಲಾಘಿಸಿದರು. ವೃದ್ಧರು ಆಶೀರ್ವಾದ ಮಾಡಿ, ಶಾಸಕರಿಗೆ ಹಾಗೂ ಪೆರೇರಾ ಕುಟುಂಬಕ್ಕೆ ಶುಭ ಹಾರೈಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0

