ಕೊಡಗು ಕಾಂಗ್ರೆಸ್ ವಾರ್ ರೂಂ ಪರಿಶೀಲಿಸಿದ ಎ.ಐ.ಸಿ.ಸಿ ಕಾರ್ಯದರ್ಶಿ ಪಿ.ವಿ.ಮೋಹನ್
ಮಡಿಕೇರಿ: ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಪಿ.ವಿ.ಮೋಹನ್ ರವರು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿರುವ ಎಸ್.ಐ.ಆರ್ ವಾರ್ ರೂಂ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷರಾದ ಟಿ.ಪಿ.ರಮೇಶ್ ರವರ ಸಮ್ಮುಖದಲ್ಲಿ ಜಿಲ್ಲಾ ವಾರ್ ರೂಂ ಹಾಗೂ ತಾಲ್ಲೂಕು ವಾರ್ ರೂಂ ತಂಡದ ಸದಸ್ಯರಿಂದ ಎಸ್.ಐ.ಆರ್ ಕಾರ್ಯಕ್ರಮದ ವಿವರಗಳನ್ನು ಪಡೆದು ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮತದಾರರ ಕರಡು ಪ್ರತಿ ಪ್ರಕಟಗೊಂಡ ನಂತರ ಜಾಗೃತರಾಗಿ ಕೆಲಸ ಮಾಡುವಂತೆ ಸಲಹೆ ಸೂಚನೆಗಳನ್ನು ನೀಡಿದರು.
ಜಿಲ್ಲಾ ಕಾಂಗ್ರೆಸ್ ವಾರ್ ರೂಂ ಅಧ್ಯಕ್ಷರಾದ ತೆನ್ನಿರ ಮೈನಾ,ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎ.ಹಂಸ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಪಿ.ಶಶಿಧರ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಬಿ.ಸತೀಶ್, ವಿರಾಜಪೇಟೆ ಬ್ಲಾಕ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ,ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷರಾದ ಮೀದೇರಿರ ನವೀನ್, ನಾಪೊಕ್ಲು ಬ್ಲಾಕ್ ಕಾರ್ಯಾಧ್ಯಕ್ಷರಾದ ಶೌಕತ್ ಆಲಿ ರವರಿಂದ ಪತ್ಯೇಕವಾಗಿ ಮಾಹಿತಿ ಕಲೆ ಹಾಕಿದರು.
ಮಡಿಕೇರಿ ವಿಧಾನ ಸಭಾ ಕ್ಷೇತ್ರ ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ವಿವರಗಳನ್ನು ಕ್ಷೇತ್ರವಾರು ಸಂಚಾಲಕರಾದ ಜನಾರ್ಧನ್ ಹಾಗೂ ಬೇಕಲ್ ರಮಾನಾಥ್ ನೀಡಿದರು. ತಾಲ್ಲೂಕುವಾರು ಸಂಚಾಲಕರಾದ ಕೋಚನ ಚೇತನ್,ಜಾನ್ಸನ್ ಪಿ.ವಿ. ಚಂದನ್ ಕುಮಾರ್,ಸುನೀಲ್ , ಹಾಗೂ ಎ.ಜೆ.ಬಾಬು ರವರು ತಾಲ್ಲೂಕಿನಲ್ಲಿ ನಡೆದ ಪ್ರಗತಿಯ ಬಗ್ಗೆ ವರದಿ ಒಪ್ಪಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
