Kodagu

ಮೂರ್ನಾಡು ಗೌಡ ಮಹಿಳಾ ಒಕ್ಕೂಟ ವತಿಯಿಂದ ಆಟಿ ಹಬ್ಬ ಆಚರಣೆ

admincoorgdaily

ಮೂರ್ನಾಡು ಗೌಡ ಮಹಿಳಾ ಒಕ್ಕೂಟ ವತಿಯಿಂದ  ಆಟಿ ಹಬ್ಬ ಆಚರಣೆ

ನಾಪೋಕ್ಲು: ಗೌಡ ಮಹಿಳಾ ಒಕ್ಕೂಟ ಮೂರ್ನಾಡು ವತಿಯಿಂದ ಮೂರ್ನಾಡು ಗೌಡ ಸಮಾಜದಲ್ಲಿ ಆಟಿ ಹಬ್ಬ ಆಚರಣೆಯ ಮಾಡುವುದರ ಮೂಲಕ ವೈವಿಧ್ಯಮಯ ಕಾರ್ಯಕ್ರಮದ ಮಹತ್ವವನ್ನು ತಿಳಿಸಲಾಯಿತು .

 ಕಾರ್ಯಕ್ರಮದಲ್ಲಿ ಹರಪನಹಳ್ಳಿ ರವೀಂದ್ರ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರು ಹಾಗೂ ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಮಹಿಳಾ ಒಕ್ಕೂಟ ಇವರ ಕಾರ್ಯ ಸಾಧನೆ ಅದ್ಭುತವಾದದ್ದು ಇಂತಹ ಒಂದು ಕಾರ್ಯಕ್ರಮವನ್ನು ಆಯೋಜಿಸಿ ಜನರಿಗೆ ಅದರ ಮಹತ್ವವನ್ನು ತಿಳಿಸಿರುವುದು ಶ್ಲಾಘನೀಯ ಇಂತಹ ಕಾರ್ಯಕ್ರಮವು ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಲ್ಲೂ ಆಚರಿಸುವಂಥ ಆಗಬೇಕು ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಮಹಿಳೆಯರ ಸಾಧನೆ ವಿಶ್ವಕ್ಕೆ ಪ್ರಸರಿಸಲಿ ಎಂದು ನುಡಿದರು ಹಾಗೂ ಸಂಘಕ್ಕೆ ಐವತ್ತು ಸಾವಿರ ರೂಪಾಯಿಗಳನ್ನು ಉದಾರವಾಗಿ ನೀಡಿದರು.

 ಅತಿಥಿ ನಿವೃತ್ತ ಡಿಸ್ಟಿಕ್ ನರ್ಸಿಂಗ್ ಆಫೀಸರ್ ಬೈಲೊಳಿ ಕುಸುಮ ಇವರು ಆಟಿ ಹಬ್ಬದ ವಿಶೇಷ ಅಡುಗೆಗಳ ಪ್ರದರ್ಶನವನ್ನು ಉದ್ಘಾಟಿಸಿ ಇಂಥ ವಿಶೇಷ ಆರ್ ಟಿ ಅಡುಗೆ ತಿಂಡಿಗಳು ನಮ್ಮ ಅಡುಗೆ ಮನೆಯಲ್ಲಿ ತಯಾರಾಗುವುದರೊಂದಿಗೆ ನಮ್ಮ ಆರೋಗ್ಯವು ಹೆಚ್ಚುತ್ತದೆ ಇದರ ಹಿಂದೆ ಮಹಿಳೆಯರ ಶ್ರಮ ಹಾಗೂ ಪುರುಷರ ಪ್ರೋತ್ಸಾಹ ಇದೆ ಎಂದು ನುಡಿದರು.

ಮೂರ್ನಾಡು ಗೌಡ ಸಮಾಜದ ಅಧ್ಯಕ್ಷರಾದ ಪಾಣತಲೆ ಹರೀಶ ಇವರು ಮಾತನಾಡಿ ಹಿಂದಿನ ಕಾರ್ಯಕ್ರಮ ತುಂಬಾ ಮಹತ್ವಪೂರ್ಣವಾದದ್ದು ನಾವೆಲ್ಲ ರೈತಾಪಿ ವರ್ಗದಿಂದ ಬಂದವರು ಇಂದು ಎಲ್ಲರೂ ಕೃಷಿಯನ್ನು ಮರೆಯುತ್ತಿದ್ದಾರೆ ಆದುದರಿಂದ ನಾವೆಲ್ಲರೂ ಕೃಷಿ ಚಟುವಟಿಕೆಯಲ್ಲಿ ತೊಡಗಬೇಕು ನಮ್ಮ ಮಕ್ಕಳಿಗೂ ಕೂಡ ಕೃಷಿಯಲ್ಲಿ ಮುಂದುವರಿಯಲು ಅನುವು ಮಾಡಿಕೊಡಬೇಕು ಇದರಿಂದ ನಮ್ಮ ಜನಾಂಗದ ಪರಂಪರೆ ಉಳಿಯುವುದು ಎಂದರು.

 ಮೂರ್ನಾಡು ಗೌಡ ಮಹಿಳಾ ಒಕ್ಕೂಟ ಅಧ್ಯಕ್ಷರಾದ ಕಲ್ಲು ಮುಟ್ಟಲು ಜಸ್ಮಿ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಸರ್ವರಿಗೂ ಸಲ್ಲಿಸಿದರು ಎಲ್ಲರೂ ನಮ್ಮ ಈ ಮಹಿಳಾ ಒಕ್ಕೂಟವು ಬೆಳೆಯುವುದಕ್ಕೆ ತಮ್ಮ ಎಲ್ಲರ ಸಹಕಾರ ಪ್ರೋತ್ಸಾಹ ಸದಾ ಇರಲಿ ಎಂದು ಕೇಳಿಕೊಂಡರು. ಆಟಿಹಬ್ಬದಲ್ಲಿ ಮಾಡುವಂತಹ ತಿಂಡಿ ತಿನಿಸುಗಳ ಮಹತ್ವವನ್ನು ಹಾಗೂ ಅವುಗಳ ಉಪಯೋಗಗಳ ಕುರಿತು ಕಲ್ಲುಮುಟ್ಟಳು ಜಮುನಾ ಇವರು ಮಾತನಾಡಿದರು .

 ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರನ್ನು ಮನರಂಜಿಸಿ. ಕೊನೆಯದಾಗಿ ಪಾರ್ಟಿ ಹಬ್ಬದ ವಿಶೇಷ ತಿಂಡಿಗಳ ಭೋಜನಗಳೊಂದಿಗೆ ಸಮಾರಂಭಕ್ಕೆ ವಿರಾಮ ಹಾಕಲಾಯಿತು. ಕಾರ್ಯಕ್ರಮದಲ್ಲಿ ಮೂರ್ನಾಡು ಸುತ್ತಮುತ್ತಲಿನ ಮಹಿಳಾ ಸದಸ್ಯರು ಆಟಿ ಸೊಪ್ಪು, ಮರ ಕೆಸ, ಕಣಿಲೆ, ಹಣಬೆ, ಏಡಿ, ಹಲಸಿನ ಹಣ್ಣು, ಹಲಸಿನ ಬೀಜ ಮುಂತಾದ ಬಗೆಬಗೆಯ ಆಟಿ ತಿಂಗಳ ತಿಂಡಿ ತಿನಿಸುಗಳ ಎಲ್ಲರ ಗಮನ ಸೆಳೆಯಿತು .