ಅಬಾಕಸ್ ಅಕಾಡೆಮಿಯಿಂದ ಪ್ರತಿಭಾ ಪರೀಕ್ಷೆ; ಏಷ್ಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ವಿದ್ಯಾರ್ಥಿಗಳ ಸಾಧನೆ

Jan 15, 2026 - 15:26
 0  244
ಅಬಾಕಸ್ ಅಕಾಡೆಮಿಯಿಂದ ಪ್ರತಿಭಾ ಪರೀಕ್ಷೆ;  ಏಷ್ಯಾ ಬುಕ್ ಆಫ್ ರೆಕಾರ್ಡ್ ನಲ್ಲಿ  ವಿದ್ಯಾರ್ಥಿಗಳ ಸಾಧನೆ

ಕುಶಾಲನಗರ :- ಸ್ಮಾರ್ಟ್ ಬ್ರೈನ್ಸ್ ಅಬಾಕಸ್ ಆಕಾಡೆಮಿ ವತಿಯಿಂದ ಸ್ಥಳೀಯ ಶಟಲ್ ಒಳಾಂಗಣ ಸಭಾಂಗಣದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಅಬಾಕಸ್, ವೇದಿಕ್ ಮ್ಯಾಥ್ಸ್, ರೂಬಿಕ್ಸ್ ಕ್ಯೂಬ್,ಕ್ಯಾಲಿಗ್ರಫಿ ಮತ್ತು ಮಿಡ್‌ಬ್ರೇನ್ ಆಕ್ಟಿವೇಶನ್ ಪ್ರತಿಭಾ ಪರೀಕ್ಷೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶನ ಮಾಡಿದರು.

 ಯೂನಿಕ್ ಅಕಾಡೆಮಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಚಿನ್ಮಯ್ ಕಣ್ಣಿಗೆ ಬಟ್ಟೆ ಕಟ್ಟಿ ನಿಗದಿತ ಸಮಯದಲ್ಲಿ ಚೆಸ್ ಆಡುವ ಮೂಲಕ ಇಂಡಿಯಾ ಹಾಗು ಎಷ್ಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಮಾಡಿದ್ದಾನೆ.

ಉದ್ಗಂ ಶಾಲೆಯ ವಿದ್ಯಾರ್ಥಿ ದೇವಾಂಸ ಕಣ್ಣಿಗೆ ಬಟ್ಟೆ ಕಟ್ಟಿ ವಾಹನ ಚಾಲನೆ, ವಾಹನಗಳ ಬಣ್ಣ ಪತ್ತೆ ಹಚ್ಚುವಿಕೆ, ಕ್ಯಾರಂ ಸೇರಿದಂತೆ ವಿವಿಧ ಪ್ರತಿಭೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಇದರೊಂದಿಗೆ ಇತರ ವಿದ್ಯಾರ್ಥಿಗಳಾದ ಯಶಸ್ವಿನಿ, ಸಫಾ, ಕೃಷ್ಣ ರಾಮನ್,ಕಶ್ವಿ, ಇಕ್ಷ್ವಾಕು ರಾಮನ್ ಅಚ್ಯುತ ರಾಮನ್ ಸೇರಿದಂತೆ ಇತರ ವಿದ್ಯಾರ್ಥಿಗಳು ಕಣ್ಣಿಗೆ ಬಟ್ಟೆ ಕಟ್ಟಿ ಪರೀಕ್ಷೆಯಲ್ಲಿ ಪಾಲ್ಗೊಂಡು ಬಣ್ಣ ಗುರುತು ಪತ್ತೆ ಹಚ್ಚುವಿಕೆ, ಬರಹ, ಚಿತ್ರ ಬಿಡಿಸುವ ಸ್ಪರ್ಧೆ, ವ್ಯಕ್ತಿ ಚಿತ್ರ, ಚೆಸ್, ಕ್ಯಾರಂ, ನಾಣ್ಯ ನೋಟು ಪತ್ಯಚ್ಚುವಿಕೆ ಸೇರಿದಂತೆ ವಿವಿಧ ಸಾಹಸಮಯ ಪ್ರದರ್ಶನ ತೋರಿದರು.

ಸ್ಮಾರ್ಟ್ ಬ್ರೈನ್ಸ್ ಅಬಾಕಸ್ ಆಕಾಡೆಮಿ ನಿರ್ದೇಶಕಿ ಕುಸುಮಾ ಎಸ್. ರಾಜ್ ಮಾತನಾಡಿ ಸ್ಮಾರ್ಟ್ ಬ್ರೈನ್ಸ್ ಅಬಾಕಸ್ ಆಕಾಡೆಮಿ ಕಳೆದ ಹಲವು ವರ್ಷಗಳಿಂದಲೂ ಮಾನವ ಮಿದುಳಿನ ಸಾಮರ್ಥ್ಯವನ್ನು ಮತ್ತು ಅದರ ಪರಿಣಾಮಕಾರಿ ಬಳಕೆಯನ್ನು ಸಕ್ರಿಯಗೊಳಿಸುವ ಕೌಶಲ್ಯ ನಿರ್ವಹಣೆ ತಂತ್ರಗಳನ್ನು ಕಲಿಸುತ್ತದೆ .ಅಬ್ಯಾಕಸ್ ವಿದ್ಯಾರ್ಥಿಗಳಿಗೆ ಹೆಚ್ಚಿನ ವೇಗ ಮತ್ತು ನಿಖರತೆಯೊಂದಿಗೆ ಮಾನಸಿಕ ಲೆಕ್ಕಾಚಾರಗಳನ್ನು ಮಾಡಲು ಸಹಾಯ ಮಾಡುತ್ತದೆ.

ಇದು ಅವರ ಜೀವನದುದ್ದಕ್ಕೂ ಎಲ್ಲಾ ಕ್ಷೇತ್ರಗಳಲ್ಲಿ ಜ್ಞಾನವನ್ನು ಅನ್ವಯಿಸುವಂತೆ ಮಾಡುತ್ತದೆ ಅಬಾಕಸ್ ಮಕ್ಕಳ ಬೆಳವಣಿಗೆಗೆ ಪೂರಕವಾದ ಕಲಿಕ ತರಬೇತಿಯನ್ನು ನೀಡಲಾಗುತ್ತಿದೆ ಎಂದರು. ಪ್ರತಿಭಾ ಪರೀಕ್ಷ ಸಂದರ್ಭ ವಿದ್ಯಾರ್ಥಿಗಳ ಪೋಷಕರು ಪಾಲ್ಗೊಂಡಿದ್ದರು.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 0