ಜೂನಿಯರ್ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ ಆಗಿ ಅಭಿನ್ ರೈ ಹ್ಯಾಟ್ರಿಕ್ ಸಾಧನೆ

Mar 2, 2026 - 16:57
 0  244
ಜೂನಿಯರ್ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ ಆಗಿ ಅಭಿನ್ ರೈ ಹ್ಯಾಟ್ರಿಕ್ ಸಾಧನೆ

ಮಡಿಕೇರಿ ಮಾಚ್೯ 2: ಕೊಡಗು ಮೂಲದ ಯುವ ಮೋಟರ್ ರ್ಯಾಲಿ ಪಟು ಅಭಿನ್ ರೈ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಹ್ಯಾಟ್ರಿಕ್ ಚಾಂಪಿಯನ್ ಆದ ಹೆಗ್ಗಳಿಕೆಗೆ ಕಾರಣರಾಗಿದ್ದಾರೆ.

 ಮಹಾರಾಷ್ಟ್ರದ ನಾಸಿಕ್ ನಲ್ಲಿ ಫೆ.27 ರಿಂದ ಮಾಚ್೯ 1 ರವರೆಗೆ ಆಯೋಜಿತ ನ್ಯಾಷನಲ್ ಮೋಟರ್ ರ್ಯಾಲಿ ಸ್ಪಧೆ೯ಯಲ್ಲಿ ಅಭಿನ್ ರೈ ಗಣನೀಯ ಸಾಧನೆ ತೋರಿದ್ದು, 371 ಕಿ.ಮೀ. ಅಂತರದ ರ್ಯಾಲಿಯಲ್ಲಿ ಭಾರತದಾದ್ಯಂತಲಿನ 32 ಸ್ಪಧಿ೯ಗಳು ಪಾಲ್ಗೊಂಡಿದ್ದರು. ಈ ಸ್ಪಧೆ೯ಯ ಸವ೯ ವಿಭಾಗಗಳಲ್ಲಿ ಅಭಿನ್ 10 ನೇ ಸ್ಥಾನ ಗಳಿಸಿದ್ದು, ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ ವಿಭಾಗದಲ್ಲಿ ಎರಡನೇ ಮತ್ತುು ಜೂನಿಯರ್ ಇಂಡಿಯನ್ ನ್ಯಾಷನಲ್ ರ್ಯಾಲಿ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ.

ಮೂರನೇ ಬಾರಿಗೆ ಅಭಿನ್ ರೈ, ಇಂಡಿಯನ್ ನ್ಯಾಷನಲ್ ರ್ಯಾಲಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.ಅಭಿನ್ ರೈ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಮೇಕೇರಿ ಮೂಲದ ರತ್ನಾಕರ್ ರೈ ಮತ್ತು ನಮಿತಾ ರೈ ಅವರ ಪುತ್ರರಾಗಿದ್ದಾರೆ. ಚಿಕ್ಕಮಗಳೂರಿನ ಮಹಮ್ಮದ್ ಜಶೀರ್ ಕೋ ಡ್ರೈವರ್ ಆಗಿ ಕಾಯ೯ನಿವ೯ಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0