ಖಾಸಗಿ ಬಸ್ಸ್ ಮತ್ತು ಲಾರಿಗಳ ನಡುವೆ ಅಪಘಾತ: ಸಂಪೂರ್ಣ ಜಖಂಗೊಂಡ ಬಸ್ಸ್ ಮುಂಭಾಗ
ಸುಂಟಿಕೊಪ್ಪ:ಸೋಮವಾರಪೇಟೆಗೆ ಆಗಮಿಸುತ್ತಿದ್ದ ಖಾಸಗಿ ಬಸ್ ಮತ್ತು ಮಡಿಕೇರಿಯತ್ತ ತೆರಳುತ್ತಿದ್ದ ಲಾರಿಗಳ ನಡುವೆ ಹೊಸತೋಟ ಗ್ರಾಮದಲ್ಲಿ ಮುಖಾಮುಖಿ ಅಪಘಾತವಾಗಿದ್ದು, ಬಸ್ ಮುಂಭಾಗ ಜಖಂಗೊಂಡಿರುವ ಘಟನೆ ಗುರುವಾರ ನಡೆದಿದೆ. ಯಾವುದೇ ಅಪಾಯ ಎದುರಾಗಿಲ್ಲ. ಸ್ಥಳಕ್ಕೆ ಇಲ್ಲಿನ ಪೊಲೀಸ್ ಅಧಿಕಾರಿಗಳು ತೆರಳಿ ಮಾಹಿತಿ ಪಡೆದು, ದೂರು ದಾಖಲಿಸಿದರು.