ಪಬ್ಲಿಕ್ ಪರೀಕ್ಷೆಯಲ್ಲಿ ಸಾಧನೆ:ಸಮಸ್ತ ಸ್ಮಾರಕ ಪ್ರಶಸ್ತಿ ಪಡೆದ ಮಡಿಕೇರಿ ಬದ್ರಿಯಾ ಹಯಾತುಲ್ ಇಸ್ಲಾಮ್ ಮದರಸ ವಿದ್ಯಾರ್ಥಿ ಹಾಗೂ ಅಧ್ಯಾಪಕ
admincoorgdaily

ಮಡಿಕೇರಿ: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ 2024-25ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಮಡಿಕೇರಿ ರೇಂಜ್ ಮಟ್ಟದಲ್ಲಿ 10ನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದು ಸಮಸ್ತ ಸ್ಮಾರಕ ಆವಾರ್ಡ್ ಪಡೆದ ಮಡಿಕೇರಿ ಬದ್ರಿಯಾ ಹಯಾತುಲ್ ಇಸ್ಲಾಂ ಮದರಸ ರುವೈಝ್ ಹಾಗೂ ತರಗತಿ ಅಧ್ಯಾಪಕರು, ಮದರಸ ಪ್ರಾಂಶುಪಾಲರಾದ ಎಂ.ಬಿ ಹನೀಫ್ ಫೈಝಿ ರವರಿಗೆ ಮದರಸ ಸ್ವದೇಶೀ ರೈಂಜ್ ಇಶ್ಕ್ ಮಜ್ಲಿಸ್ ಕಾರ್ಯಕ್ರಮದಲ್ಲಿ ಸ್ಮಾರಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಮುಶಾವರ ಸದಸ್ಯರು ಹಾಗೂ ಕೊಡಗು ಜಿಲ್ಲಾ ಖಾಝಿಗಳಾದ ಶೈಖುನಾ ಎಂ ಅಬ್ದುಲ್ಲ ಫೈಝಿ ಉಸ್ತಾದರಿಂದ ಪ್ರಶಸ್ತಿಯನ್ನು ಸ್ವೀಕರಿಸಲಾಯಿತು.