ಅಂತರಾಷ್ಟ್ರೀಯ ಕರಾಟೆಯಲ್ಲಿ ಕೊಡಗಿನ ವಿದ್ಯಾರ್ಥಿಗಳ ಸಾಧನೆ

Apr 18, 2026 - 22:42
 0  423
ಅಂತರಾಷ್ಟ್ರೀಯ ಕರಾಟೆಯಲ್ಲಿ ಕೊಡಗಿನ ವಿದ್ಯಾರ್ಥಿಗಳ ಸಾಧನೆ

ಪೊನ್ನಂಪೇಟೆ, ಏ. 18: ಕೇರಳದ ತ್ರಿಶೂರಿನಲ್ಲಿ ಜಪಾನ್ ಶೋಟಕಾನ್ ಕರಾಟೆ ಸಂಸ್ಥೆ ವತಿಯಿಂದ ತಾ. 11 ಮತ್ತು 12 ರಂದು ಆಯೋಜಿಸಲಾಗಿದ್ದ, ಅಂತರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್ ಶಿಫ್ ನಲ್ಲಿ ಕೊಡಗಿನ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ, ಹಲವು ಪ್ರಶಸ್ತಿಗಳನ್ನು ಪಡೆದುಕೊಳ್ಳುವ ಮೂಲಕ ಸಾಧನೆ ಮಾಡಿದ್ದಾರೆ.

 ಪೊನ್ನಂಪೇಟೆ ಸಂತ ಅಂಥೋಣಿ ಪ್ರಾಥಮಿಕ ಶಾಲೆಯ ತನ ಫಾತಿಮ 2 ಚಿನ್ನ, ರಿಷಿಕ್ 1 ಬೆಳ್ಳಿ, 1 ಕಂಚು, ಮಹಿತ್ ಸೋಮಯ್ಯ 2 ಕಂಚು, ಅಯ್ಯಣ್ಣ 1 ಬೆಳ್ಳಿ, 1 ಕಂಚು, ಮೊಬಿನ್,1 ಕಂಚು, ತಾನ್ಯಾ ಕಾವೇರಿ 1 ಬೆಳ್ಳಿ, 1 ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಸಂತ ಅಂತೋಣಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸ್ವಾಗತ್ ಪಿ. ಹೆಚ್ 2 ಚಿನ್ನ, ಅಕರ್ಷ್ ಬಿ. ಎಸ್ 1 ಚಿನ್ನ, ಗೌರವ್ ಪಿ. ಎಸ್ 1 ಕಂಚು, ಹುದಿಕೇರಿ ಲಿಟ್ಲ್ ಫ್ಲವರ್ ವಿದ್ಯಾಸಂಸ್ಥೆಯ ತ್ರಿಶಾನ್ 2 ಚಿನ್ನ, ಪೊನ್ನಂಪೇಟೆ ಸಿಐಟಿ ಕಾಲೇಜಿನ ವಿದ್ಯಾರ್ಥಿ ಶ್ರೀ ಹರಿ 1 ಬೆಳ್ಳಿ, 1ಕಂಚು, ಗೋಣಿಕೊಪ್ಪಲು ಲಯನ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ಕೃಶ್ ವಿಕ್ ಎ. ಎಸ್ 1 ಚಿನ್ನ, 1ಬೆಳ್ಳಿ, ಇಶಾನ್. ಐ. ಎಸ್ 1 ಬೆಳ್ಳಿ, ಹೃದಯ್, 2 ಕಂಚು, ಗೋಣಿಕೊಪ್ಪಲು ಕಾಲ್ಸ್ ವಿದ್ಯಾಸಂಸ್ಥೆಯ ಧೃವಿಕ್ 1 ಬೆಳ್ಳಿ, 1ಕಂಚು, ಡೆಲ್ಸಿಣಿ ಪೊನ್ನಂಪೇಟೆ 1 ಚಿನ್ನದ ಪದಕ ಪಡೆದುಕೊಂಡು ಸಾಧನೆ ಮಾಡಿದ್ದಾರೆ. ಪೊನ್ನಂಪೇಟೆ ಕರಾಟೆ ತರಬೇತಿ ಕೇಂದ್ರದ ತರಬೇತುದಾರ ಬಿ. ಎಸ್. ಸಂತೋಷ್ ಕುಮಾರ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುತ್ತಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0