ರಾಜ್ಯ ಮಟ್ಟದ “178ನೇ ಬ್ರೈನೋಬ್ರೈನ್ ಸ್ಪರ್ಧೆ-2026” ರಲ್ಲಿ ಮಡಿಕೇರಿ ಮಕ್ಕಳ ಸಾಧನೆ
ಮಡಿಕೇರಿ: “ಬ್ರೈನೋಬ್ರೈನ್” ಇಂಟರ್ ನ್ಯಾಷನಲ್ ದುಬೈ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಬೆಂಗಳೂರಿನ ಡಾ|| ಬಾಬು ಜಗಜೀವನ್ ರಾಂ ರಿಸರ್ಚ್ ಇನ್ಸ್ಟಿಟ್ಯೂಟ್‍ನಲ್ಲಿ ಆಯೋಜಿಸಲಾಗಿದ್ದ “178ನೇ ರಾಜ್ಯ ಮಟ್ಟದ “ಬ್ರೈನೋಬ್ರೈನ್ ಸ್ಪರ್ಧೆ-2026”ರಲ್ಲಿ ಮಡಿಕೇರಿಯ “ಬ್ರೈನೋಬ್ರೈನ್” ಕೇಂದ್ರದ 50 ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಪದಕ ಪಡೆದಿದ್ದಾರೆ.
ಈ ಸ್ಪರ್ಧೆಯಲ್ಲಿ ಕರ್ನಾಟಕದ ಒಟ್ಟು 80 “ಬ್ರೈನೋಬ್ರೈನ್” ಕೇಂದ್ರಗಳಿಂದ ಸುಮಾರು 2000 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮಡಿಕೇರಿ “ಬ್ರೈನೋಬ್ರೈನ್” ಕೇಂದ್ರದ ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಅವರ ನೇತೃತ್ವದಲ್ಲಿ ವಿವಿಧ ವಿಭಾಗಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಕೇವಲ 3 ನಿಮಿಷದಲ್ಲಿ ವಿವಿಧ ರೀತಿಯ ಲೆಕ್ಕಗಳನ್ನು ಅತೀ ಚುರುಕಾಗಿ ಮಾಡುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಹೆಚ್ಚು ಮಕ್ಕಳು ಅಬಾಕಸ್ ತರಗತಿಗೆ ಹೊಸ ದಾಖಲಾತಿ ಪಡೆದುಕೊಂಡು ಅತೀ ಪರಿಶ್ರಮದಿಂದ ಶೇ.100ರಷ್ಟು ಫಲಿತಾಂಶದೊಂದಿಗೆ 24 ಚಾಂಪಿಯನ್ ಟ್ರೋಫಿ, 16 ಚಿನ್ನದ ಪದಕ ಮತ್ತು 10 ಬೆಳ್ಳಿಯ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಸ್ಪರ್ಧೆಯಲ್ಲಿ ಮಡಿಕೇರಿ “ಬ್ರೈನೋಬ್ರೈನ್” ಕೇಂದ್ರಕ್ಕೆ “ಬೆಸ್ಟ್ ಪ್ರಾಂಚೈಸಿ” ಮತ್ತು “ಬೆಸ್ಟ್ ಫ್ಯಾಕಲ್ಟಿ” ಪ್ರಶಸ್ತಿ ಲಭಿಸಿದ್ದು, ವಿದ್ಯಾರ್ಥಿಗಳ ಕಠಿಣ ಪರಿಶ್ರಮದ ಸಾಧನೆಯ ಹೆಗ್ಗಳಿಕೆಯು ತಮ್ಮ ತರಗತಿಯ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸಲ್ಲಬೇಕು. ಈ ಅದ್ಭುತ ಯಶಸ್ಸಿಗೆ ಕಾರಣಕರ್ತರಾದ ಆ ಮೂರು ನಿಮಿಷಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಹಾಗೂ ಮುತುವರ್ಜಿ ವಹಿಸಿ ಬೆಂಗಳೂರಿಗೆ ಕರೆತಂದ ಪೋಷಕರಿಗೆ ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ರವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಬ್ರೈನೋಬ್ರೈನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಆನಂದ್ ಸುಬ್ರಮಣ್ಯಂ, ತಾಂತ್ರಿಕ ನಿರ್ದೇಶಕ ಶ್ರೀ ಅರುಲ್ ಸುಬ್ರಮಣ್ಯಂ ಉಪಸ್ಥಿತರಿದ್ದು, ಮಡಿಕೇರಿ “ಬ್ರೈನೋಬ್ರೈನ್” ಕೇಂದ್ರದ ಮಕ್ಕಳ ಅತ್ಯುತ್ತಮ ಸಾಧನೆಯನ್ನು ಶ್ಲಾಘೀಸಿದರು.
ಚಾಂಪಿಯನ್ ಟ್ರೋಫಿ ವಿಜೇತರು: ಸೋನ್ಹ್ ಸೋಮಣ್ಣ.ಪಿ.ಸಿ, ಅನ್ವಿತ್.ಎಸ್, ಆರುಷಿ.ಕೆ.ಸಿ, ರಾಜು.ಎಂ.ಎಂ, ಶ್ರೀಹಾನ್ ಸಂಜಯ್ ಜಿತ್ತಿ, ಲಕ್ಷಿತ.ಬಿ.ಆರ್, ಲಲಿತ್ ಆದಿತ್ಯ.ಬಿ, ಎಸ್.ಕೆ. ಪರಾಗ್ ದೇವಯ್ಯ, ದಿಗಂತ್.ಸಿ.ಪಿ, ಕನಿಷ್ಕ.ಪಿ.ಸಿ, ಪ್ರಥಮ್ ಚಿನ್ನಪ್ಪ ಬಿ.ಎಲ್, ಯಾನ್ವಿ ಬೋಜಮ್ಮ.ಎಂ.ಪಿ, ಅಭಿನವ್ ಕೃಷ್.ಜಿ, ಏಡನ್ ಜೆ.ತಾರಕನ್, ಲಿವ್ಯ ಸುನಿತ್‍ಕುಮಾರ್, ಶೌರ್ಯ ಎಸ್.ವಿ ಕುಡ್ತೇಕರ್, ತನಿಷ್ಕ.ಕೆ.ಎ, ನಮನ್ ಎಂ.ಗೌಡ, ಗಣಿತ್ ಪೊನ್ನಣ್ಣ.ಎಂ.ಎಂ, ಮಿನುಗು.ಎಸ್, ರುಷಾಂಕ್.ಸಿ.ಸಿ, ವಿಯಾನ್ ಸೂರ್ಯ, ಲಶಿಕ ರೈ ಜೆ, ಮೀನಾಕ್ಷಿ.ಡಿ.ಎಂ.
ಚಿನ್ನದ ಪದಕ ವಿಜೇತರು: ಜೆಶ್ವಿತ ತಂಗಮ್ಮ ಎ.ಪಿ, ಸಮರ್ಥ್ ಗಣಪತಿ ಎಸ್.ಕೆ, ತನುಷ್ ಪೂವಣ್ಣ.ಸಿ.ಪಿ, ಕನಿಷ ಸುನಿತ್‍ಕುಮಾರ್, ನಿಲ್ಹಾ ಜೆ ತಾರಕನ್, ರಿಯಾಂಕ ಎಂ, ಆರಾಧ್ಯ.ಕೆ.ಸಿ, ಹರ್ಷಿಣಿ.ಎಂ.ಕೆ, ಮಯಾಂಕ್.ಎಂ, ಪೂಜನ್ ಗೌಡ.ಎಂ.ಎ, ಬಿ.ಕೃಶ್ವಿನ್ ಅದ್ವಿಕ್, ರಂಜಿತ್.ಎಂ.ಎಂ, ಐಯಾರ.ಎಸ್, ಆದ್ಯ ನವೀನ್ ರೈ, ಕುಷಿ ದೇವಯ್ಯ ಬಿ.ಪಿ, ಮೊಹಮ್ಮದ್ ಅಬಾನ್ ಸಿ.
ಬೆಳ್ಳಿ ಪದಕ ವಿಜೇತರು: ವಿಹಾನ್ಯ ಹೆಚ್.ಎ, ದಿಯಾ.ವೈ.ಬಿ, ಇಸ್ರಾಯೇಲ್ ಸಾನ್ವಿಕ್.ಎಸ್, ಚಾರ್ವಿ.ಬಿ.ಆರ್, ರುಶಾಲಿ ಪಿ.ಜೆ, ಇಸ್ರಾಯೇಲ್ ಸಾಥ್ವ್ವಿಕ್.ಎಸ್, ಮೋನಿಷ್.ಬಿ.ಎಸ್, ಜೊಹನ್ನಾ ಮಡ್ತಾ, ಕೃತಾರ್ಥ್ ಎಂ, ಪ್ರಣವ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
