Kodagu

ಕರಾಟೆಯಲ್ಲಿ ನಾಪೋಕ್ಲುವಿನ ವಿದ್ಯಾರ್ಥಿಗಳ ಸಾಧನೆ

admincoorgdaily

ವರದಿ:ಝಕರಿಯ ನಾಪೋಕ್ಲು

 ನಾಪೋಕ್ಲು :ಮೈಸೂರಿನಲ್ಲಿ ನಡೆದ ಮೈಸೂರು ಕಪ್ ಕರಾಟೆ ಪಂದ್ಯಾವಳಿಯಲ್ಲಿ ನಾಪೋಕ್ಲು ವಿನ ಸೇಕ್ರೆಡ್ ಹಾರ್ಟ್ಸ್ ಮತ್ತು ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡು ಸಾಧನೆ ಮಾಡಿದ್ದಾರೆ.

ನಾಪೋಕ್ಲುವಿನ ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಲಚನ್ ಪೂನ್ನಣ್ಣ ಕರಾಟೆಯ ಕಟಾ ವಿಭಾಗದಲ್ಲಿ ಪ್ರಥಮ ಹಾಗೂ ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡರೆ,ನಾಪೋಕ್ಲುವಿನ ಸೇಕ್ರೆಡ್ ಹಾರ್ಟ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ದೈವಿಕ್ ಕರಾಟೆಯ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.

ಲಚನ್ ಪೂನ್ನಣ್ಣ ನೆಲಜಿ ಗ್ರಾಮದ ಮನವಟ್ಟಿರ ಪ್ರವೀಣ್ ಮತ್ತು ಶೈನಿ ದಂಪತಿಗಳ ಪುತ್ರನಾಗಿದ್ದು,ದೈವಿಕ್ ನವೀನ್ ಪೂಜಾರಿ ಹಾಗೂ ವನಿತಾ ದಂಪತಿಗಳ ಪುತ್ರ. ಇವರು ಕರಾಟೆ ಮಾಸ್ಟರ್ ಚೆಟ್ಟಿಯಾರಂಡ ದಿಲನ್ ತಿಮ್ಮಯ್ಯ ಹಾಗೂ ಧೀರಜ್ ಕಾರ್ಯಪ್ಪ ಸಹೋದರರಿಂದ ತರಬೇತಿ ಪಡೆಯುತ್ತಿದ್ದಾರೆ.