Kodagu

ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸೇಕ್ರೆಡ್ ಹಾರ್ಟ್ ಶಾಲೆಯ ವಿದ್ಯಾರ್ಥಿಗಳ ಸಾಧನೆ

admincoorgdaily

ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸೇಕ್ರೆಡ್ ಹಾರ್ಟ್ ಶಾಲೆಯ ವಿದ್ಯಾರ್ಥಿಗಳ ಸಾಧನೆ

ಕುಶಾಲನಗರ, ಆ.27 : ಕೂಡಿಗೆಯ ಕ್ರೀಡಾಶಾಲೆಯಲ್ಲಿ ಗುರುವಾರ ನಡೆದ 2026 - 27ನೇ ಸಾಲಿನ ವಲಯ ಮಟ್ಟದ ಮೇಲಾಟದ ಸ್ಪರ್ಧೆಯಲ್ಲಿ ಹೆಬ್ಬಾಲೆಯ ಸೇಕ್ರೆಡ್ ಹಾರ್ಟ್ ಶಾಲೆಯ ವಿದ್ಯಾರ್ಥಿಗಳು ಹಲವು ಕ್ರೀಡೆಯಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದ್ದಾರೆ.

ವಿದ್ಯಾರ್ಥಿಗಳಾದ ಜ್ಞಾನವಿ ಲಾಂಗ್ ಜಂಪ್ ಪ್ರಥಮ ಸ್ಥಾನ, ರಂಜಿತಾ ಎಸ್. ಎಸ್ ಶಾರ್ಟ್ ಪುಟ್ ದ್ವಿತೀಯ, ಡಿಸ್ಕಸ್ ತ್ರೋ ಕೀರ್ತನ ತೃತೀಯ, ಡಿಸ್ಕಸ್ ತ್ರೋ ತನುಷ್ ದೇವಯ್ಯ ತೃತೀಯ, ಶಾರ್ಟ್ ಪುಟ್ ತನುಷ್ ದೇವಯ್ಯ ಪ್ರಥಮ, 200 ಮೀಟರ್ ಓಟದ ಸ್ಪರ್ಧೆಯಲ್ಲಿ ರಂಜಿತಾ ಎಸ್. ಎಸ್. ಪ್ರಥಮ ಸ್ಥಾನ, 100 ಮೀಟರ್ ಓಟದಲ್ಲಿ ವಿಷ್ಮಿತಾ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಶಾಲೆಯ ವ್ಯವಸ್ಥಾಪಕ ಎಚ್.ಎಸ್. ಲೋಕೇಶ್ ತಿಳಿಸಿದ್ದಾರೆ.