ಕರಾಟೆಯಲ್ಲಿ ಜೇ಼ನ್ ಸಿಟೋರಿಯೋ ಸ್ಕೂಲ್ ಆಫ್ ಇಂಡಿಯಾ ವಿದ್ಯಾರ್ಥಿಗಳ ಸಾಧನೆ
ವಿರಾಜಪೇಟೆ: ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ವಿ.ಎನ್ ಯೋಧ ಮಾರ್ಷಲ್ ಆಟ್ಸ್ ಆಕಾಡೆಮಿ ವತಿಯಿಂದ ಮೈಸೂರಿನ ಟೆರೆಶೀಯನ್ ಕಾಲೇಜು ಒಳಾಂಗಣ ಕ್ರೀಡಾಂಗಣದಲ್ಲಿ 5 ನೇ ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಪಂದ್ಯಾವಳಿ 2025 ಮೈಸೂರು ಕಪ್ ನಡೆಯಿತು. ವಿರಾಜಪೇಟೆ ಗ್ರಾಮಾಂತರ ಪ್ರದೇಶವಾದ ಪೆರುಂಬಾಡಿ ಗ್ರಾಮದ ಜೇ಼ನ್ ಸಿಟೋರಿಯೋ ಸ್ಕೂಲ್ ಆಫ್ ಇಂಡಿಯಾ ದ ಒಟ್ಟು 17 ಮಂದಿ ವಿಧ್ಯಾರ್ಥಿಗಳು ಭಾಗವಹಿಸಿದ್ದರು. ಪಂದ್ಯಾವಳಿಯಲ್ಲಿ ಕುಮಿತೆ ಮತ್ತು ಕಥ ವಿಭಾಗದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರದರ್ಶನ ನೀಡಿ 2 ಚಿನ್ನ 07 ಬೆಳ್ಳಿ, 03 ಕಂಚಿನ ಪದಕಗಳನ್ನು ಪಡೆದುಕೊಂಡು ತರಭೇತಿ ಶಾಲೆ ಮತ್ತು ಜಿಲ್ಲೆ ಗೆ ಕೀರ್ತಿ ತಂದಿದ್ದಾರೆ.ವಿಧ್ಯಾರ್ಥಿಗಳಿಗೆ ಸೆನ್ಸಾಯಿ ಶಿವಪ್ಪ ಅವರು ತರಬೇತಿ ನೀಡಿರುತ್ತಾರೆ. ವಿಧ್ಯಾರ್ಥಿಗಳ ಸಾಧನೆ ಸಾರ್ವಜನಿಕ ವಲಯದಲ್ಲಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.