Kodagu

ಕರಾಟೆ-ಡು ಇಂಟರ್‌ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಗೋಣಿಕೊಪ್ಪಲಿನ ಜಯ ಜೋಯಪ್ಪ ಅವರ ತರಬೇತಿಯ ವಿದ್ಯಾರ್ಥಿಗಳ ಸಾಧನೆ

admincoorgdaily

ಕರಾಟೆ-ಡು ಇಂಟರ್‌ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಗೋಣಿಕೊಪ್ಪಲಿನ  ಜಯ ಜೋಯಪ್ಪ ಅವರ ತರಬೇತಿಯ ವಿದ್ಯಾರ್ಥಿಗಳ ಸಾಧನೆ

ಗೋಣಿಕೊಪ್ಪ:- ಮೈಸೂರು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ 11ನೇ ಶಿಟೋರ್ಯು ಕರಾಟೆ-ಡು ಇಂಟರ್‌ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಗೋಣಿಕೊಪ್ಪ ಲಿನ ಜಯ ಜೋಯಪ್ಪ ಅವರ ತರಬೇತಿಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಅಖಿಲ ಭಾರತ ಶಿಟೋರ್ಯು ಕರಾಟೆ-ಡು ಯೂನಿಯನ್ ಸಂಯೋಜನೆಯಲ್ಲಿ WKF, WSKF, APSKF, AKF, SAKF, CKF ಹಾಗೂ CIOKF ಸಹಯೋಗದೊಂದಿಗೆ ಚಾಂಪಿಯನ್‌ಶಿಪ್ ಆಯೋಜಿಸಲಾಗಿತ್ತು.

 ಚಾಂಪಿಯನ್‌ಶಿಪ್‌ನಲ್ಲಿ ಧ್ಯಾನ್ ರೈ ಹಾಗೂ ನಿಶಾಲ್ ನಾಚಪ್ಪ ಅವರು ಕುಮಿತೆ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ದೇಚಮ್ಮ ಅವರು ಕುಮಿತೆಯಲ್ಲಿ ಚಿನ್ನದ ಪದಕ ಹಾಗೂ ಕಟಾ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ.

ಮೌರ್ಯ ಸುಬ್ಬಯ್ಯ ಮತ್ತು ಇಫ್ರೋಜ್ ಅವರು ಕುಮಿತೆಯಲ್ಲಿ ಚಿನ್ನದ ಪದಕ ಹಾಗೂ ಕಟಾ ವಿಭಾಗದಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಮೋಹಕ್ ಅವರು ಕುಮಿತೆಯಲ್ಲಿ ಬೆಳ್ಳಿ ಹಾಗೂ ಕಟಾ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಯೋಕೊಹಾಮಾ, ಜಪಾನ್‌ನಿನ 11ನೇ ಶಿಟೋರ್ಯು ಕರಾಟೆ-ಡು ಇಂಟರ್‌ನ್ಯಾಷನಲ್ ಚಾಂಪಿಯನ್‌ಶಿಪ್‌ಗೆ ಸಂಬಂಧಿಸಿದ ಆಯ್ಕೆ ಪ್ರಕ್ರಿಯೆಯ ಭಾಗವಾಗಿಯೂ ಈ ಸ್ಪರ್ಧೆ ಮಹತ್ವ ಪಡೆದಿತ್ತು. ವಿದ್ಯಾರ್ಥಿಗಳ ಸಾಧನೆಗೆ ಕೋಚ್ ಜೋಯಪ್ಪ ಹಾಗೂ ಕಾರ್ತಿಕ್ ಅಭಿನಂದನೆ ಸಲ್ಲಿಸಿದ್ದು, ನಿರಂತರ ತರಬೇತಿ, ಶಿಸ್ತು ಮತ್ತು ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.