ಹಣಕ್ಕಾಗಿ ಡ್ರಗ್ಸ್ ದಂಧೆಗಿಳಿದ ನಟನ ಬಂಧನ; 40 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶ

Oct 1, 2025 - 20:08
 0  633
ಹಣಕ್ಕಾಗಿ ಡ್ರಗ್ಸ್ ದಂಧೆಗಿಳಿದ ನಟನ ಬಂಧನ; 40 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶ
Photo credit: INDIA TODAY

ಚೆನ್ನೈ: ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ನಟ ವಿಶಾಲ್ ಬ್ರಹ್ಮ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ಬಂಧಿಸಿದ್ದಾರೆ. ಅವರ ಬಳಿಯಿಂದ ಅಂದಾಜು ₹40 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.

2019ರಲ್ಲಿ ಬಿಡುಗಡೆಯಾದ ಸ್ಟೂಡೆಂಟ್ ಆಫ್ ದಿ ಇಯರ್ 2 ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ 32 ವರ್ಷದ ಅಸ್ಸಾಂ ಮೂಲದ ಈ ನಟ, ಸಿಂಗಾಪುರದಿಂದ ಚೆನ್ನೈಗೆ ಆಗಮಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ. AI 347 ವಿಮಾನದಲ್ಲಿ ಬಂದ ಅವರು ಹೊತ್ತೊಯ್ಯುತ್ತಿದ್ದ ಟ್ರಾಲಿ ಬ್ಯಾಗ್‌ನಲ್ಲಿ ಮಾದಕ ವಸ್ತುಗಳು ಪತ್ತೆಯಾಗಿವೆ.

ಮೂಲಗಳ ಪ್ರಕಾರ, ಹಣದ ಅಗತ್ಯವಿದ್ದ ಸಂದರ್ಭದಲ್ಲಿ ನೈಜೀರಿಯನ್ ಗ್ಯಾಂಗ್ ಬ್ರಹ್ಮ ಅವರನ್ನು ಸಂಪರ್ಕಿಸಿತ್ತು. ರಜಾದಿನಗಳ ಹೆಸರಿನಲ್ಲಿ ಕಾಂಬೋಡಿಯಾಕ್ಕೆ ಕರೆದೊಯ್ಯುವ ಆಮಿಷ ನೀಡಿ, ಹಿಂದಿರುಗುವಾಗ ಮಾದಕ ವಸ್ತುಗಳನ್ನು ಸಾಗಿಸಲು ಒತ್ತಾಯಿಸಲಾಗಿತ್ತು.

ಅಧಿಕಾರಿಗಳು ಈ ಪ್ರಕರಣದ ಹಿಂದೆ ಕಾರ್ಯನಿರ್ವಹಿಸುತ್ತಿರುವ ಅಂತರರಾಷ್ಟ್ರೀಯ ನೈಜೀರಿಯನ್ ಗ್ಯಾಂಗ್ ಅನ್ನು ಪತ್ತೆಹಚ್ಚಲು ತನಿಖೆಯನ್ನು ವಿಸ್ತರಿಸಿದ್ದಾರೆ.

 ಇದಕ್ಕೂ ಮೊದಲು ಜೂನ್‌ನಲ್ಲಿ, ಕಾಲಿವುಡ್ ನಟರಾದ ಕೃಷ್ಣ ಮತ್ತು ಶ್ರೀಕಾಂತ್ ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿತರಾಗಿದ್ದರು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0