ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣಳಾದ ಅಫ್ನ ತಸ್ನೀಮಳಿಗೆ ಸನ್ಮಾನ
admincoorgdaily

ಮಡಿಕೇರಿ;ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗರಗಂದೂರು ಮೊರಾರ್ಜಿ ದೇಸಾಯಿ ವಸತಿ ಕಾಲೇಜು ವಿಜ್ಞಾನ ( ಪಿ.ಸಿ.ಎಂ.ಬಿ) ವಿಭಾಗದ ವಿಧ್ಯಾರ್ಥಿನಿ ಅಫ್ನ ತಸ್ನೀಮ ಅವರು 575/600 (95.83%) ಅಂಕ ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.ಇವರ ಸಾಧೆಯನ್ನು ಗುರುತಿಸಿ ಹರದೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ಎ ಮುಸ್ತಫಾ ಅವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಂ.ಎ ಮುಸ್ತಫಾ ಅವರು, ಗರಗಂದೂರು ಮಲ್ಲಿಕಾರ್ಜುನ ಕಾಲೋನಿಯ ನಿವಾಸಿಗಳಾದ ಎಂ.ಎ. ಯಾಕುಬ್ ಮತ್ತು ಬಿ.ಹೆಚ್. ಜಮೀಲ ದಂಪತಿಯ ಪುತ್ರಿಯಾಗಿರುವ ಅಫ್ನ ತಸ್ನೀಮ ಅವರ ಸಾಧನೆ ಇಡೀ ಗ್ರಾಮಕ್ಕೆ ಹೆಮ್ಮೆಯಾಗಿದ್ದು,ಮುಂದಿನ ದಿನಗಳಲ್ಲಿ ತಸ್ನೀಮ ಅವರ ಉನ್ನತ ಶಿಕ್ಷಣಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.