ಆಗಸ್ಟ್ 10 ರಂದು ಅಖಂಡ ಭಾರತ ಸಂಕಲ್ಪ ದಿನಾಚರಣೆ

Aug 7, 2026 - 17:02
 0  97
ಆಗಸ್ಟ್ 10 ರಂದು ಅಖಂಡ ಭಾರತ ಸಂಕಲ್ಪ ದಿನಾಚರಣೆ

ಗೋಣಿಕೊಪ್ಪ ; ಪೊನ್ನಂಪೇಟೆ ತಾಲೂಕು ಹಿಂದು ಜಾಗರಣ ವೇದಿಕೆ ವತಿಯಿಂದ ಆಗಸ್ಟ್ 10 ರಂದು ಅಖಂಡ ಭಾರತ ಸಂಕಲ್ಪ ದಿನಾಚರಣೆ ಆಚರಿಸಲಾಗುವುದು ಎಂದು ಪೊನ್ನಂಪೇಟೆ ತಾಲೂಕು ಸಹ ಸಂಯೋಜಕ್ ಪುತ್ತಾಮನೆ ಅನಿಲ್ ಪ್ರಸಾದ್ ತಿಳಿಸಿದ್ದಾರೆ.

   ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ಗೋಣಿಕೊಪ್ಪದಿಂದ ಪೊನ್ನಂಪೇಟೆ ವರೆಗೆ ವಾಹನ ಜಾಥಾ ನಡೆಯಲಿದೆ. ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

   ಸ್ವಾತಂತ್ರ್ಯ ಸಂದರ್ಭ ಅಖಂಡ ಭಾರತವನ್ನು ಚೂರು ಚೂರು ಮಾಡಿರುವ ಕರಾಳ ದಿನದ ಹಿಂದಿರುವ ಕರಾಳ ಸತ್ಯವನ್ನು ಪ್ರತೀ ಭಾರತೀಯರು ಅರಿಯಬೇಕಿದೆ. ದೇಶಭಕ್ತ ಹಿಂದುಗಳ ಹೃದಯ ಘೋರ ಗಾಯ ಅಳಿದಿಲ್ಲ. ಮಾತೃ ಭೂಮಿಯನ್ನು ಮತ್ತೆ ಅಖಂಡ ಭಾರತವಾಗಿ ಮಾಡಬೇಕಿರುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.

   ಹಿಂದು ಜಾಗರಣ ವೇದಿಕೆ ಜಿಲ್ಲಾ ಸಹ ಸಂಯೋಜಕ ಅಲ್ಲುಮಾಡ ಶರತ್ ಪೆಮ್ಮಯ್ಯ ಮಾತನಾಡಿ, ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಿಂದ ಬೆಳಗ್ಗೆ 9.30 ಗಂಟೆಗೆ ಜಾಥಾ ಹೊರಡಲಿದ್ದು, ಬಸ್ ನಿಲ್ದಾಣ ಮೂಲಕ ಪೊನ್ನಂಪೇಟೆಗೆ ಸೇರಲಿದೆ. ಪಾಲ್ಗೊಳ್ಳುವ ಬೈಕ್ ಸವಾರರು ಕಡ್ಡಾಯವಾಗಿ ವಾಹನದ ದಾಖಲೆ ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಂಡು ಪಾಲ್ಗೊಳ್ಳಬೇಕಿದೆ. ಹೆಲ್ಮೇಟ್ ನಿಯಮ ಕೂಡ ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡಿಕೊಂಡರು.

  ತಾಲೂಕು ಸಂಯೋಜಕ ಸುಳ್ಳಿಮಾಡ ಸಂಪತ್ ಮಾತನಾಡಿ, 11.30 ಗಮಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರಾಂತ ಶಾರೀರಿಕ ಪ್ರಮುಖ್ ಸತೀಶ್ ಕುತ್ಯಾರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ವಿಶ್ವ ಹಿಂದು ಪರಿಷತ್ ಮಾಜಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಿರಿಯಪಂಡ ಎಂ. ರಾಜಾ ನಂಜಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

 ಗೋಷ್ಠಿಯಲ್ಲಿ ತಾಲೂಕು ಸಹ ಸಂAಯೋಜಕ್ ಮುಳೇಂಗಡ ಸುಖೇಶ್, ಕಾರ್ಯಕರ್ತರುಗಳಾದ ದಿನೇಶ್, ಪುತ್ತಾಮನೆ ಯತೀಶ್, ಮಾಚಂಗಡ ನವೀನ್ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0