ಇಗ್ಗುತ್ತಪ್ಪ ದೇವರ ಪವಿತ್ರ ಬೆಟ್ಟದ ಸ್ಥಳ ಖರೀದಿಗೆ ಅಖಿಲ ಕೊಡವ ಸಮಾಜ ನಿರ್ಧಾರ
ಮಡಿಕೇರಿ, ಜೂನ್ 28: ಕೊಡಗಿನ ಇಗ್ಗುತ್ತಪ್ಪ ದೇವರ ಆದಿಸ್ಥಾನ ಮಲ್ಮ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಪವಿತ್ರ ಬೆಟ್ಟದ ತಪ್ಪಲಿನಲ್ಲಿ ಮಾರಾಟವಾಗಿರುವ ಸ್ಥಳದ ವಿವಾದಕ್ಕೆ ಸಂಬಂಧಿಸಿ ಅಖಿಲ ಕೊಡವ ಸಮಾಜ ಮಹತ್ವದ ನಿರ್ಧಾರ ಕೈಗೊಂಡಿದೆ.
ಖರೀದಿದಾರ ಎಂ. ಮುಮ್ತಾಜ್ ರವರು ಅಖಿಲ ಕೊಡವ ಸಮಾಜವನ್ನು ಖುದ್ದಾಗಿ ಭೇಟಿಯಾಗಿ ಈ ಸ್ಥಳಗಳನ್ನು ನೋಂದಾಯಿತ ಸಂಸ್ಥೆಗೆ ಮಾರಾಟ ಮಾಡುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಇಂದು ವಿಶೇಷ ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ನೆಲಜಿ, ಪೇರೂರು, ಬಲ್ಲಮಾವಟಿ ಗ್ರಾಮಸ್ಥರು, ಯುನೈಟೆಡ್ ಕೊಡವ ಆರ್ಗನೈಸೇಷನ್, ಜಬೂಮಿ ಚಾರಿಟೆಬಲ್ ಟ್ರಸ್ಟ್, ರಾಜ್ಯ ರೈತ ಸಂಘ ಕೊಡಗು ಘಟಕ, ಬೆಂಗಳೂರು ಮತ್ತು ಕೊಡಗಿನ ಕೊಡವ ಸಮಾಜದ ಅಧ್ಯಕ್ಷರು, ಕೊಡವ ಭಾಷಿಕ ಸಮಾಜದ ಸಂಚಾಲಕರು ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.

