ಅಖಿಲ ಕೊಡವ ಸಮಾಜದಿಂದ ಮಲ್ಮ ಬೆಟ್ಟದ ತಪ್ಪಲಿನ ವಿವಾದಿತ ಎರಡೂ ಸ್ಥಿರಾಸ್ತಿಗಳ ಖರೀದಿಗೆ ನಿರ್ಧಾರ
ಮಡಿಕೇರಿ:ಅಖಿಲ ಕೊಡವ ಸಮಾಜದ ವತಿಯಿಂದ ವಿರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ವಿವಾದಿತ ಮಲ್ಮ ಬೆಟ್ಟದ ಸ್ಥಿರಾಸ್ತಿಗಳ ಬಗೆಗಿನ ಚರ್ಚೆಗೆ ತುರ್ತು ಸಭೆ ಕರೆಯಲಾಗಿತ್ತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಕಾರ್ಯಕಾರಿ ಮಂಡಳಿಯ ಸದಸ್ಯರುಗಳು, ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷರಾದ ಅಮ್ಮಣಿಚಂಡ ರವಿ ಉತ್ತಪ್ಪ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ, ನೆಲಜಿ, ಪೇರೂರು, ಬಲ್ಲಮಾವಟಿಯ " ನೆಲಜಿ ಮಲ್ಮ ಹಿತರಕ್ಷಣ ಸಮಿತಿಯ" ಪ್ರಮುಖರು ಹಾಗೂ ಮಚ್ಚುರ ರವೀಂದ್ರ, ಚಂಗೇಟಿರ ಕುಶಾಲಪ್ಪ, ನೆಲಜಿ ಇಗ್ಗುತ್ತಪ್ಪ ಮಲ್ಮ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮಣವಟ್ಟಿರ ಹರೀಶ್ ಕುಶಾಲಪ್ಪ,ಉಪಾಧ್ಯಕ್ಷ ಕೈಬುಲಿರ ಸಾಬು ಗಣಪತಿ,ಕಾರ್ಯದರ್ಶಿ ಮಂಡಿರ ಸಚಿನ್ ಗಣಪತಿ, ಸಹ ಕಾರ್ಯದರ್ಶಿ ಕೈಬುಲಿರ ದಿನು ಕಾವೇರಪ್ಪ, ಮಾಳೆಯಂಡ ಜಗದ ಈರಪ್ಪ, ಮಾಳೆಯoಡ ವಿಜು ಅಪ್ಪಚ್ಚ, ಮಣವಟ್ಟಿರ ಅರುಣ್ ಪಳಂಗಪ್ಪ, ಚಿಯಕಪೂವoಡ ಸುನಿಲ್, ಮಂಡಿರ ರಿಪ್ಪನ್, ಬಾಳೆಯಡ ಲವ ಬೆಳ್ಯಪ್ಪ, ಬಾಳೆಯಡ ಲಸ, ಅಪ್ಪುಮಣಿಯಂಡ ಕಿಶು ಮೇದಪ್ಪ, ಮುಂಡಂಡ ರಂಜನ್, ಮತ್ತು "ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್" ಅಧ್ಯಕ್ಷರಾದ ಚೊಟ್ಟೆಕ್ಮಡ ರಾಜೀವ್ ಬೋಪಯ್ಯ ಮತ್ತು "ಯುಕೋ" ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಡ ಮಂಜು ಚಿಣ್ಣಪ್ಪ ಮತ್ತು ಪದಾಧಿಕಾರಿಗಳು, ಹಲವು ಕೊಡವ ಸಮಾಜದ ಅಧ್ಯಕ್ಷರುಗಳ ಸಮ್ಮುಖದಲ್ಲಿ ಸಮಾಲೋಚನೆ ನಡೆಸಲಾಯಿತು.
ಸದ್ಯ ಶ್ರೀ ಎಂ. ರವರ ಒಡೆತನದಲ್ಲಿರುವ ನೆಲಜಿ ಗ್ರಾಮದ ಸಿರಾಸ್ತಿಗಳಲ್ಲಿ ರಸ್ತೆಯ ಅಗಲೀಕರಣ ಹಾಗೂ ಕೆರೆ, ಹೊಂಡಗಳ ನಿರ್ಮಾಣದಿಂದಾಗಿ ಕೊಡಗಿನಾದ್ಯಂತ ಬಹಳ ದೊಡ್ಡ ಮಟ್ಟದ ಪ್ರತಿಭಟನೆ ಹಾಗೂ ವಿವಾದ ಸೃಷ್ಟಿಯಾಗಿತ್ತು. ತಕ್ಷಣವೇ ಅಲ್ಲಿದ್ದ ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಪತ್ರಿಕಾ ಗೋಷ್ಠಿ ನಡೆಸಿ ಜೂನ್ 29ರಂದು ಅಪರಾಹ್ನ ವಿರಾಜಪೇಟೆಯ ಅಖಿಲ ಕೊಡವ ಸಮಾಜದ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದ ಶ್ರೀ ಎಂ. ರವರು ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಎರಡು ಸ್ಥಿರಾಸ್ತಿಗಳನ್ನು ಅಖಿಲ ಕೊಡುವ ಸಮಾಜಕ್ಕೆ ಮಾರಾಟ ಮಾಡುವುದಾಗಿಯೂ ಅದಕ್ಕೆ ತಕ್ಕ ಹಣ ಸಂಗ್ರಹಣೆಗೆ ಸೂಕ್ತ ಸಮಯ ನೀಡುವುದಾಗಿಯೂ ಮಾತುಕತೆ ನಡೆಸಿ ನಿರ್ಗಮಿಸಿದ್ದರು.
ಈ ನಿಮಿತ್ತ ಚರ್ಚಿಸಲು ಆಡಳಿತ ಮಂಡಳಿಯ ಪದಾಧಿಕಾರಿಗಳು ಬೆಂಗಳೂರಿನಲ್ಲಿ ಶಾಸಕ ಎ. ಎಸ್. ಪೊನ್ನಣ್ಣ ನವರೊಂದಿಗೆ ಚರ್ಚಿಸಿ ಇತ್ತೀಚೆಗಷ್ಟೇ ಕೊಡಗಿಗೆ ಮರಳಿದ್ದರು. ಸ್ಥಿರಾಸ್ತಿಗಳನ್ನು ಅರಣ್ಯ ಇಲಾಖೆಗೆ ನೀಡಲು ಪ್ರಯತ್ನಿಸಿದ್ದ ಬಗ್ಗೆ ನೆಲಜಿ ಪೇರೂರು ಗ್ರಾಮಸ್ಥರು ಹಾಗೂ ಮಲ್ಮ ಹಿತರಕ್ಷಣ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದರು.
ಜಬ್ಬುಮಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ರಾಜೀವ್ ಬೋಪಯ್ಯ ಮಾತನಾಡಿ ವಿವಾದಿತ ಜಾಗದಲ್ಲಿ ನಿರ್ಮಿಸಿದ ಕೆರೆ ಅಮೂಲ್ಯ ಬಿದಿರಿನ ಮೆಳೆಗಳ ನಾಶದಿಂದಾಗಿ ಆಗಿರುವ ಪ್ರಕೃತಿ ನಾಶದ ಬಗ್ಗೆ ಮತ್ತೊಮ್ಮೆ ಗಮನ ಸೆಳೆದು , ಅರಣ್ಯಾಧಿಕಾರಿಗಳ ದಿವ್ಯ ಮೌನದ ಬಗ್ಗೆ ಖಂಡಿಸಿದರು.
ಅಖಿಲ ಕೊಡವ ಸಮಾಜಕ್ಕೆ ಖರೀದಿಸಲು ತಮ್ಮ ಸಂಸ್ಥೆ ಯಿಂದ ಅಗತ್ಯವಾದ ಸದ್ಯದ ಮಟ್ಟಿಗಿನ ಹಣಕಾಸು ಒದಗಿಸುವ ಭರವಸೆ ನೀಡಿದರು. ಆರ್ಥಿಕವಾಗಿ ಸಬಲರಾದ ನಮ್ಮ ಜನರೇ ಜಮ್ಮ ಜಹಗೀರುಗಳನ್ನು ಹೊರಗಿನವರಿಗೆ ಮಾರಾಟ ಮಾಡುತ್ತಿದ್ದು ಕೊಡಗಿನ ಅನನ್ಯ ಸಂಸ್ಕೃತಿಗೆ ದಕ್ಕೆ ತಂದಿದೆ ಅದು ಈಗ ಕೊಡವರ ಪವಿತ್ರ ಕ್ಷೇತ್ರಗಳಾದ ತಲಕಾವೇರಿ ಹಾಗೂ ಇಗ್ಗುತ್ತಪ್ಪ ಕ್ಷೇತ್ರಗಳ ಬುಡಕ್ಕೆ ಬಂದು ನಿಂತಿದೆ ಸದ್ಯ ಶಾಸಕರಾಗಿರುವ ಪೊನ್ನಣ್ಣನವರು ಮಂತ್ರಿಯಾದಲ್ಲಿ, ಉತ್ತಮ ಕಾನೂನು, ನಿಯಮಾವಳಿ ತಂದು ಇದರ ನಿಯಂತ್ರಣಕ್ಕೆ ಅವಕಾಶ ಮಾಡಿಕೊಡಬೇಕೆಂದು ಕೋರಿದರು.
ಯುಕೋ ಸಂಘಟನೆಯ ಕೊಕ್ಕಲೆಮಡ ಮಂಜು ಚಿಣ್ಣಪ್ಪ ಅವರು ಮಾತನಾಡಿ ನೆಲಜಿ ಬಲ್ಲಮ್ಮಾವಟ್ಟಿ ಗ್ರಾಮಕ್ಕೆ ಅಡಗಿದ ಪ್ರದೇಶಗಳು ಕೊಡವ ಸಂಸ್ಕೃತಿಯ ಅನನ್ಯ ಪ್ರಾಚೀನ ನೆಲೆಬೀಡುಗಳಾಗಿದ್ದು ದಿನೇ ದಿನೇ ಮಾರಾಟವಾಗುತ್ತಿರುವ ಸ್ಥಿರಾಸ್ತಿಗಳು ಕೊಡಗಿನ ಅಮೂಲ್ಯ ಪರಿಸರ ಜನಜೀವನಕ್ಕೆ ಧಕ್ಕೆ ತಂದಿದೆ ಎಂದರು.
ಈ ಸಮಾಲೋಚನೆಯ ನಂತರ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣನವರ ಸೂಚನೆಯನ್ನು ಸರ್ವಾನುಮತದಿಂದ ಸಭೆಯು ಅಂಗೀಕರಿಸಿ ಮೂರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಸಭೆಯ ಮೂರು ತೀರ್ಮಾನಗಳು: 1. ನೆಲಜಿಯ 71.92 ಎಕರೆ ಸ್ಥಿರಾಸ್ತಿಗಳ ಖರೀದಿಗಾಗಿ ಶೀಘ್ರದಲ್ಲಿಯೇ ಶ್ರೀ ಎಂ. ರವರೊಂದಿಗೆ ಅಗತ್ಯ ಅಗ್ರಿಮೆಂಟ್ ಮಾಡಬೇಕಿದೆ. 2. ಜನಾಂಗದ ಉನ್ನತ ಸಂಸ್ಥೆಯಾದ ಅಖಿಲ ಕೊಡವ ಸಮಾಜವು ಎಂ. ರವರು ಮಾರಾಟ ಮಾಡುವ ಆಸ್ತಿಗಳನ್ನು ಮತ್ತಷ್ಟು ಸುಧಾರಿತ ಬೆಲೆಗೆ ಹೊಂದಿಕೊಳ್ಳುವ ಸಲುವಾಗಿ ಮಾರಾಟ ಮಾಡಿರುವ, ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವ ಮುಕ್ಕಾಟಿರ ಎಂ.ಜಯರವರು, ಸಹಕರಿಸುವಂತೆ ಕೋರಿರುವುದಕ್ಕೆ ಮುಕ್ಕಾಟಿರ ಜಯ ಸಮ್ಮತಿಸಿದರು.
3. ಆದಾಯ ತೆರಿಗೆ ವಿನಾಯಿತಿ ಲಭ್ಯತೆಯವರೆಗೆ - ಕಾನೂನಿನಡಿ ಲಭ್ಯವಿರುವ ಆದಾಯ ತೆರಿಗೆ ವಿನಾಯಿತಿ ಸಿಗುವವರೆಗೆ, ಖರೀದಿಗೆ ಅಗತ್ಯವಿರುವ ಹಣಕಾಸಿಗೆ ಜನಾಂಗದ ಪ್ರಮುಖರಿಂದ ಸಾಲದ ವ್ಯವಸ್ಥೆ ಮಾಡುವಂತೆ ತೀರ್ಮಾನ. ಸಭೆಯಲ್ಲಿ ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ತೇಲಪoಡ ಸುಬ್ಬಯ್ಯ, ಅಖಿಲ ಕೊಡವ ಸಮಾಜದ ಕೇಂದ್ರೀಯ ಸಮಿತಿಯ ಸದಸ್ಯರು, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷರಾದ ಹಾಗೂ ನೆಲಜಿ ಇಗ್ಗುತಪ್ಪ ದೇವಳದ ಅಧ್ಯಕ್ಷ ಮುಂಡoಡ ನಾಣಯ್ಯ ಅವರು ಮಾತನಾಡಿ, ಶುಭ ಹಾರೈಸಿದರು. ಅಖಿಲ ಕೊಡವ ಸಮಾಜದ ಉಪಾಧ್ಯಕ್ಷ ಪೊರೇರ ಬಿದ್ದಪ್ಪ ವಂದನಾರ್ಪಣೆಯೊಂದಿಗೆ ಸಭೆ ಸಂಪನ್ನಗೊಂಡಿತು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
