ಆಲೂರುಸಿದ್ದಾಪುರ: ತಪೋಕ್ಷೇತ್ರ ಮನೆಹಳ್ಳಿ ಮಠದಲ್ಲಿ ಡಿಸೆಂಬರ್ 6ರಂದು ಲಕ್ಷದೀಪೋತ್ಸವ

Dec 4, 2025 - 16:11
 0  122
ಆಲೂರುಸಿದ್ದಾಪುರ: ತಪೋಕ್ಷೇತ್ರ ಮನೆಹಳ್ಳಿ ಮಠದಲ್ಲಿ ಡಿಸೆಂಬರ್ 6ರಂದು ಲಕ್ಷದೀಪೋತ್ಸವ

ಸೋಮವಾರಪೇಟೆ:-ತಾಲೂಕಿನ ಆಲೂರುಸಿದ್ದಾಪುರ ಸಮೀಪದ ತಪೋಕ್ಷೇತ್ರ ಮನೆಹಳ್ಳಿ ಮಠದಲ್ಲಿ ಡಿಸೆಂಬರ್ 6ರಂದು ಲಕ್ಷದೀಪೋತ್ಸವ ನಡೆಯಲಿದೆ ಎಂದು ಕ್ಷೇತ್ರದ ಮಠಾಧಿಪತಿಗಳಾದ ಶ್ರೀ.ಮಹಾಂತ ಶಿವಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಕಾರ್ತಿಕ ಮಾಸದಲ್ಲಿ ಕ್ಷೇತ್ರದ ದೇವರುಗಳಾದ ವೀರಭದ್ರೇಶ್ವರ,ತಪೋವನೇಶ್ವರಿ,ಗುರುಸಿದ್ಧವೀರೇಶ್ವರ ಹಾಗೂ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆಗಳು ನಡೆದಿದ್ದು ಇದೀಗ ಲಕ್ಷದೀಪೋತ್ಸವದ ಅಂಗವಾಗಿ ಪ್ರತಿನಿತ್ಯ ಅರ್ಚನೆ,ಅಭಿಷೇಕಗಳು ನಡೆಯುತ್ತಿವೆ ಎಂದು ತಿಳಿಸಿದ ಅವರು ಡಿಸೆಂಬರ್ 6ರ ಶನಿವಾರ ಲಕ್ಷದೀಪೋತ್ಸವದ ಅಂಗವಾಗಿ ವಿಶೇಷ ಪೂಜೆಗಳೊಂದಿಗೆ ರಾತ್ರಿ 8 ಗಂಟೆಗೆ ಸ್ವಾಮಿಯ ಉತ್ಸವ ನಡೆಯಲಿದೆ ಎಂದರು.

ಸಂಜೆ 6 ಗಂಟೆಗೆ ಮಠದ ಆವರಣದಲ್ಲಿ ಧಾರ್ಮಿಕ ಸಮಾರಂಭ ನಡೆಯಲಿದೆ,ಕಾರ್ಯಕ್ರಮದಲ್ಲಿ ದೀಪೋತ್ಸವಕ್ಕೆ ಚಾಲನೆ ಹಾಗೂ ಕ್ಷೇತ್ರದ 2026ನೆ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುವುದು,ನಾಡಿನ ಹರಗುರು ಚರ್ಮೂರ್ತಿಗಳ ಸಾನಿಧ್ಯದಲ್ಲಿ,ವಿವಿಧ ಜನಪ್ರತಿನಿಧಿಗಳು,ಸಾಧಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಹಾಂತ ಸ್ವಾಮೀಜಿ ಹೇಳಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0