ಎರಡು ಮಕ್ಕಳ ತಾಯಿಯ ಅಮೋಘ ಸಾಧನೆ ; ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇಕಡ 93 ಅಂಕ ಪಡೆದ ತಹಸೀನಾ

Apr 18, 2026 - 11:35
Apr 18, 2026 - 11:39
 0  584
ಎರಡು ಮಕ್ಕಳ ತಾಯಿಯ ಅಮೋಘ ಸಾಧನೆ ; ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇಕಡ 93 ಅಂಕ ಪಡೆದ ತಹಸೀನಾ

ಸಿದ್ದಾಪುರ: ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಯು ಮೂರನೇ ಸ್ಥಾನ ಪಡೆದಿದ್ದು ವಿದ್ಯಾರ್ಥಿಗಳ ಈ ಅಭೂತ ಪೂರ್ವ ಸಾಧನೆಗೆ ಜಿಲ್ಲಾಧ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜಿಲ್ಲೆಯ ಅನೇಕ ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಪಡೆದು ಸಾಧನೆಗೈದಿದ್ದಾರೆ. ಅದರ ಜೊತೆಗೆ ಸಿದ್ದಾಪುರದ VKM Tutors ನ ಸಹಕಾರದೊಂದಿಗೆ ಖಾಸಗಿಯಾಗಿ ದ್ವಿತೀಯ PUC ಪರೀಕ್ಷೆ ಬರೆದ ತಹಸೀನಾ ಎಂಬ ಗೃಹಣಿ ವಿದ್ಯಾರ್ಥಿನಿಯು 600ಕ್ಕೆ 560 ಅಂಕ ಪಡೆದು ಶೇಕಡ 93% ರ ಫಲಿತಾಂಶದೊಂದಿಗೆ ತಮ್ಮ ಕುಟುಂಬ ಹಾಗೂ ಸಂಸ್ಥೆಗೆ ಹಿರಿಮೆ ತಂದು ಕೊಟ್ಟಿದ್ದಾರೆ.

 ಇಬ್ಬರು ಮಕ್ಕಳ ತಾಯಿಯ ಈ ಸಾಧನೆಯ ಹಿಂದೆ ಅವರ ಗಂಡ ಜಂಶೀರ್ ವಾಫಿ ರವರ ಪ್ರೊತ್ಸಾಹ ಹಾಗೂ ಸಹಕಾರ ಅಡಗಿದೆ. ತನ್ನ ಮಕ್ಕಳು ಹಾಗೂ ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊತ್ತ ತಹಸೀನಾ ಅತ್ಯುತ್ತಮ ಅಂಕ ಪಡೆದು ಇತರೆ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

ತಹಸೀನಾ ಕುರಾನ್ ಕೂಡ ಕಂಠ ಪಾಠ ಮಾಡಿದ್ದು ಅವರ ಸಾಧನೆಗೆ ಎಲ್ಲಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಕಳೆದ 8 ವರ್ಷಗಳಿಂದ ಸಿದ್ದಾಪುರದಲ್ಲಿ VKM Tutors ಕಾರ್ಯಾಚರಿಸುತ್ತಿದ್ದು, 600ಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕು ಚೆಲ್ಲುವಲ್ಲಿ ಸಂಸ್ಥೆಯು ಸಹಕಾರಿಯಾಗಿದೆ.ಈ ಹಿಂದೆ ಇಲ್ಲಿ ತರಬೇತಿ ಪಡೆದ ವಿವಾಹಿತ ಮಹಿಳೆಯರಲ್ಲಿ ಶ್ರೀಮತಿ ‌ ಸುಮ, ಶ್ರೀಮತಿ ಅಂಜಲಿ ಪಿ ಎಸ್, ಶ್ರೀಮತಿ ತನ್ಷೀರ ಪಿ ಕೆ, ಶ್ರೀಮತಿ ಸಮೀರ ಪಿ ಎಸ್, ಶ್ರೀಮತಿ ಮುಬಷಿರ ಪಿ ಎಂ, ಶ್ರೀಮತಿ ಶಿಲ್ಪ, ಶ್ರೀಮತಿ ಸೆಮೀನ, ಶ್ರೀಮತಿ ನಜುಮು ಕೆ ಎಂ ಮತ್ತು ಶ್ರೀಮತಿ ಅನುಷ ಯು ಕೂಡಾ ಉತ್ತಮ ಅಂಕಗಳೊಂದಿಗೆ ಪಾಸಾದವರ ಸಾಲಿನಲ್ಲಿದ್ದಾರೆ.

 ಇಸ್ಮಾಯಿಲ್ ವಿ. ಕೆ ಹಾಗೂ ಸಜೀತಾ ಕೆ. ಎಸ್ ಇವರುಗಳ ಮಾರ್ಗದರ್ಶನ ಹಾಗೂ ಪರೀಕ್ಷಾ ಪೂರ್ವ ತಯಾರಿ ಮತ್ತು ತರಬೇತಿಯಿಂದಾಗಿ ಸಾಧನೆ ಮಾಡಿರುವುದಾಗಿ ಸಾಧಕರು ಹೆಮ್ಮೆಯಿಂದ ಹೇಳಿ ಕೊಳ್ಳುತ್ತಿದ್ದಾರೆ. ಸಾಧನೆ ಮಾಡಿರುವ ತಹಸೀನಾಳಿಗೆ ಸಮಾಜದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.

ವರದಿ; ಎಂ.ಎ ಅಜೀಜ್, ಸಿದ್ದಾಪುರ.

What's Your Reaction?

Like Like 2
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0