ಕಾರುಣ್ಯಾಶ್ರಮದ ಕೊಡಗು ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿಗಳಾಗಿ ಅಮೀನಾ ಎಂ.ಎ ಆಯ್ಕೆ

Dec 20, 2025 - 16:36
 0  759
ಕಾರುಣ್ಯಾಶ್ರಮದ ಕೊಡಗು ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿಗಳಾಗಿ ಅಮೀನಾ ಎಂ.ಎ ಆಯ್ಕೆ
ಅಮೀನಾ

ಗೋಣಿಕೊಪ್ಪ : ಕಾರುಣ್ಯಾಶ್ರಮದ ಕೊಡಗು ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿಗಳಾಗಿ ಅಮೀನಾ ಎಂ.ಎ ಆಯ್ಕೆಯಾಗಿದ್ದಾರೆ. ಪೊನ್ನಂಪೇಟೆ ತಾಲೂಕಿನ ಚೆನ್ನಂಗೊಲ್ಲಿ ನಿವಾಸಿಯಾಗಿರುವ ಇವರು ಅವಿನಾ ಡ್ರಿಮ್ಸ್ ವರ್ಲ್ಡ್ ಸೇವ ಸಂಸ್ಥೆಯ ಸಂಸ್ಥಾಪಕರಾಗಿದ್ದಾರೆ.

ಇವರು ಸರಕಾರಿ ಶಾಲೆಗಳಿಗೆ ಸಿ.ಸಿ ಕ್ಯಾಮರ ಮತ್ತು ಇನ್ನಿತರ ಪೀಠೋಪಕರಣಗಳ ಅವಶ್ಯಕತೆಯನ್ನು ಪೂರೈಸುವುದರ ಜತೆಗೆ ಸಂಕಷ್ಟದಲ್ಲಿರುವವರ ಸೇವೆಯಲ್ಲಿ ನಿರಂತರಾಗಿ ತೊಡೆಸಿಕೊಂಡಿದ್ದಾರೆ.

 ಇವರ ಸಮಾಜ ಸೇವೆಯನ್ನು ಪರಿಗಣಿಸಿ, ಕಾರುಣ್ಯಾಶ್ರಮದ ಸಂಸ್ಥಾಪಕ ಅಮರಯ್ಯ ಸ್ವಾಮಿ ಹಿರೇಮಠ ಹರೇಟನೂರು ಅವರು ಕಾರುಣ್ಯಾಶ್ರಮದ ಕೊಡಗು ಜಿಲ್ಲಾ ಸಂಪರ್ಕಧಿಕಾರಿಯಾಗಿ ಆಯ್ಕೆ ಮಾಡಿದ್ದಾರೆ ಎಂದು ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ ಮಾಹಿತಿ ನೀಡಿದ್ದಾರೆ.

What's Your Reaction?

Like Like 1
Dislike Dislike 0
Love Love 1
Funny Funny 1
Angry Angry 1
Sad Sad 1
Wow Wow 0