14ವರ್ಷ ವಯೋಮಿತಿಯ ಅಮ್ಮತಿ ವಲಯ ಮಟ್ಟದ ಫುಟ್ಬಾಲ್ ಕ್ರೀಡಾಕೂಟ : ಹುಂಡಿ ಮರ್ಕಜ್ ಪಬ್ಲಿಕ್ ಶಾಲೆ ಚಾಂಪಿಯನ್
ಸಿದ್ದಾಪುರ:ಅಮ್ಮತಿಯಲ್ಲಿ ನಡೆದ ಅಮ್ಮತಿ ವಲಯ ಮಟ್ಟದ 14 ವರ್ಷ ವಯೋಮಿತಿಯ ಫುಟ್ಬಾಲ್ ಪಂದ್ಯಾಟದಲ್ಲಿ ಹುಂಡಿಯ ಮರ್ಕಜ್ ಶಾಲೆ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪಾಲಿಬೆಟ್ಟ ಲೂರ್ಡ್ಸ್ ಹಿಲ್ ಶಾಲೆ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಸೆಮಿಫೈನಲ್ ಪಂದ್ಯದಲ್ಲಿ ಮಾರ್ಕಜ್ ಶಾಲೆಯು ಅಸ್ಸಯ್ಯದ್ ಅಸ್ಸಖಾಫಿ ಕೊಂಡಂಗೇರಿ ವಿರುದ್ಧ 2-0 ಗೊಲುಗಳ ಅಂತರದಲ್ಲಿ ಗೆಲುವು ಸಾಧಿಸಿತು 2ನೇ ಸೆಮಿಫೈನಲ್ ಪಂದ್ಯದಲ್ಲಿ ಲೂರ್ಡ್ಸ್ ಶಾಲೆಯು ಅಮ್ಮತಿಯ ಗುಡ್ ಶೆಫರ್ಡ್ ಶಾಲೆಯ ವಿರುದ್ಧ 2-0 ಗೋಲು ಅಂತರದಲ್ಲಿ ಫೈನಲ್ ಪ್ರವೇಶಿಸಿತ. ಫೈನಲ್ ಪಂದ್ಯದಲ್ಲಿ ಜಗನ್ ಬಾರಿಸಿದ 1 ಗೋಲಿನ ಮುನ್ನಡೆ ಯಲ್ಲಿ 1 -0 ಅಂತರದಲ್ಲಿ ಲೂಡ್ಸ್ ಹಿಲ್ ಪಾಲಿಬೆಟ್ಟ ತಂಡವನ್ನು ಮಣಿಸಿ ತಾಲ್ಲೂಕು ಮಟ್ಟಕ್ಕೆ ಮರ್ಕಝ್ ಶಾಲೆ ಆಯ್ಕೆಯಾಗಿದ್ದಾರೆ.ದೈಹಿಕ ಶಿಕ್ಷಕರಾದ ನಾಸಿರ್ ಹಾಗೂ ರದೀಶ್ ಹುಂಡಿ ಶಾಲೆಯ ತಂಡಕ್ಕೆ ತರಬೇತಿ ನೀಡಿದ್ದಾರೆ.