State News

ಅನನ್ಯ ಭಟ್ ನನ್ನ ಮಗಳೇ ಅಲ್ಲ! ಆಸ್ತಿಗಾಗಿ ಕಟ್ಟು ಕಥೆ ಕಟ್ಟಿದ್ದೇನೆ: ನಾನು ರಿಲೀಸ್ ಮಾಡಿದ ಫೋಟೋ ಫೇಕ್:ಸುಜಾತಾ ಭಟ್ ಸ್ಪೋಟಕ ಹೇಳಿಕೆ

admincoorgdaily

ಮಂಗಳೂರು:ನನಗೆ ಅನನ್ಯ ಭಟ್ ಅನ್ನುವ ಮಗಳೇ ಇಲ್ಲ.ನಾನು ರಿಲೀಸ್ ಮಾಡಿದ್ದ ಫೋಟೋ ಫೇಕ್ ಎಂದು ಸುಜಾತ ಭಟ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.ಇದೀಗ ಧರ್ಮಸ್ಥಳ ಘಟನೆಗೆ ಮತ್ತೊಂದು ಸ್ಪೋಟಕ ತಿರುವು ಸಿಕ್ಕಿದ್ದು, ಇನ್ ಸೈಡ್ ರೆಶ್ ಖಾಸಗಿ ಯೂಟ್ಯೂಬ್ ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದುವ ಸುಜಾತ ಭಟ್, ನನ್ನಿಂದ ತಪ್ಪಾಗಿದೆ ಕ್ಷಮಿಸಿ,ಅನನ್ಯ ಭಟ್ ನನ್ನ ಮಗಳಲ್ಲ.ಆಸ್ತಿಗಾಗಿ ಅನನ್ಯ ಭಟ್ ಕಟ್ಟು ಕಥೆ ಕಟ್ಟಿದೆ. ಮಟ್ಟಣ್ಣನವರ್ ಹೇಳಿದಂತೆ ನಾನು ಮಾಡಿದ್ದೆ,ಕ್ಷಮಿಸಿ ನನ್ನಿಂದ ತಪ್ಪಾಗಿದೆ.‌ ಸುಜಾತ ಭಟ್ ಗೆ SIT ನೋಟಿಸ್ ಕೂಡ ನೀಡಲಾಗಿದೆ.