ಸಮಥ೯ ಸಾಹಿತ್ಯ ಪ್ರತಿಷ್ಟಾನದಿಂದ ಅನಿಲ್ ಗೆ ಪ್ರಶಸ್ತಿ ಪ್ರದಾನ

Dec 30, 2025 - 16:58
 0  95
ಸಮಥ೯ ಸಾಹಿತ್ಯ ಪ್ರತಿಷ್ಟಾನದಿಂದ ಅನಿಲ್ ಗೆ ಪ್ರಶಸ್ತಿ ಪ್ರದಾನ

ಮಡಿಕೇರಿ ಡಿ. 30 - ಬೆಂಗಳೂರಿನ ಸಮಥ೯ ಸಾಹಿತ್ಯ ಮತ್ತು ಸಾಂಸ್ಕೖತಿಕ ಪ್ರತಿಷ್ಟಾನದ ವತಿಯಿಂದ ವಾಷಿ೯ಕವಾಗಿ ನೀಡಲಾಗುವ ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಸಾಧನೆಗಾಗಿನ ಗಾಂಧಿ ಪ್ರಿಯ ಹೆಸರಿನ ಪ್ರಶಸ್ತಿಯನ್ನು ಮಡಿಕೇರಿಯ ಪತ್ರಕತ೯ ಅನಿಲ್ ಹೆಚ್.ಟಿ. ಅವರಿಗೆ ಪ್ರಧಾನ ಮಾಡಲಾಯಿತು.

ಬೆಂಗಳೂರಿನ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ನ ಕುವೆಂಪು ಸಭಾಂಗಣದಲ್ಲಿ ಆಯೋಜಿತ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಪತ್ರಿಕೋದ್ಯಮ, ಕೖಷಿ, ಸಾಹಿತ್ಯ, ಸಂಗೀತ, ವೈದ್ಯಕೀಯ, ಸಮಾಜಸೇವೆ, ಉದ್ಯಮ ಸೇರಿದಂತೆ ಹಲವು ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಲಾಯಿತು. ಕೊಡಗು ಜಿಲ್ಲೆಯಿಂದ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಅನಿಲ್ ಹೆಚ್.ಟಿ ಅವರಿಗೆ ಗಾಂಧಿ ಪ್ರಿಯ ಹೆಸರಿನ ವಾಷಿ೯ಕ ಪ್ರಶಸ್ತಿ ನೀಡಲಾಯಿತು.

ಸಮಥ೯ ಸಾಹಿತ್ಯ ಮತ್ತು ಸಾಂಸ್ಕೖತಿಕ ಪ್ರತಿಷ್ಟಾನದ ಅಧ್ಯಕ್ಷ ವಿಜಯ್ ಸಮಥ೯ ಮಾತನಾಡಿ, ದೇಶದ ಮಹಾತ್ಮನ ಹೆಸರಿನಲ್ಲಿ ಸಾಮಾಜಿಕ ಸೇವಾ ಸಂಘಟನೆಗಳು ಮೀಸಲಾಗಿಟ್ಟಿರುವ ಪ್ರಶಸ್ತಿಗಳೇ ಕಡಮೆಯಾಗಿದೆ. ಗಾಂಧೀಜಿ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಚೂಣಿ ಪಾತ್ರ ವಹಿಸಿದ್ದಷ್ಟೇ ಅಲ್ಲ ಪತ್ರಿಕೋದ್ಯಮ, ಸಮಾಜಸೇವೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದವರು. ಹೀಗಾಗಿ ಗಾಂಧೀಜಿ ಮೆಚ್ಚಿನ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ ಎಂದರು. ಪ್ರಶಸ್ತಿ ಎಂಬುದು ಸಾಧಕರಿಗೆ ಮತ್ತಷ್ಟು ಸಾಧನೆ ಮಾಡಲು ಸ್ಪೂತಿ೯ಯಾಗುತ್ತದೆ ಎಂದೂ ವಿಜಯ್ ಸಮಥ೯ ಅಭಿಪ್ರಾಯಪಟ್ಟರು.

ಬೆಂಗಳೂರು ಶ್ರೀ ತ್ಯಾಗರಾಜ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಆ್ರ್ ವೆಂಕಟೇಶ್, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಶ್ರ.ದೇ ಪಾಶ್ವ೯ನಾಥ, ಸಮಾಜಸೇವಕ ಮಾನಂದಿ ರಮೇಶ್ ಸೇರಿದಂತೆ ಅನೇಕ ಗಣ್ಯರು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0