ಕೊಳಕೇರಿ ಅಂಗನವಾಡಿ ಕೇಂದ್ರದಲ್ಲಿ ವರ್ಷಾಚರಣೆ ಸಂಭ್ರಮ

ಕೊಳಕೇರಿ ಅಂಗನವಾಡಿ ಕೇಂದ್ರದಲ್ಲಿ ವರ್ಷಾಚರಣೆ ಸಂಭ್ರಮ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ನಾಪೋಕ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಳಕೇರಿ ಒಂದನೇ ಅಂಗನವಾಡಿ ಕೇಂದ್ರದಲ್ಲಿ 2026 ರ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲಾಯಿತು. ಅಂಗನವಾಡಿ ಕೇಂದ್ರದಲ್ಲಿ ಮಕ್ಕಳು ಕೇಕ್ ಕತ್ತರಿಸಿ ಪರಸ್ಪರ ಹಂಚುವ ಮೂಲಕ ನೂತನ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡರು. ಇದೇ ಸಂದರ್ಭ ನಸೀಮಾ ಆಸ್ಕರ್ ಅವರ ಮಗಳಾದ ಆಲಿಯಾ ಫಾತಿಮಾ ಮಗುವಿನ ಹುಟ್ಟುಹಬ್ಬವನ್ನು ಕೂಡ ಆಚರಿಸಲಾಯಿತು. ಈ ಸಂದರ್ಭ ಅಂಗನವಾಡಿ ಕಾರ್ಯಕರ್ತೆ ಶ್ವೇತಾ, ಸಹಾಯಕಿ ಗೀತಾ ಆರೋಗ್ಯಾಧಿಕಾರಿ ಛಾಯಾ, ಪೋಷಕರು, ಮಕ್ಕಳು ಹಾಜರಿದ್ದರು.