ಅಜ್ಜಿಕುಟ್ಟಿರ ಕುಟುಂಬಸ್ಥರ ವಾರ್ಷಿಕ ಮಹಾಸಭೆ: ಶಾಸಕ ಎಎಸ್ ಪೊನ್ನಣ್ಣ ಭಾಗಿ

ಅಜ್ಜಿಕುಟ್ಟಿರ ಕುಟುಂಬಸ್ಥರ ವಾರ್ಷಿಕ ಮಹಾಸಭೆ: ಶಾಸಕ ಎಎಸ್ ಪೊನ್ನಣ್ಣ ಭಾಗಿ

ಪೊನ್ನಂಪೇಟೆ: ಅಜ್ಜಿಕುಟ್ಟಿರ ಕುಟುಂಬಸ್ಥರ ವಾರ್ಷಿಕ ಮಹಾ ಸಭೆ ಇಂದು ಪೊನ್ನಂಪೇಟೆಯ ಕೊಡವ ಸಮಾಜದಲ್ಲಿ ಜರುಗಿತು. ಅಜ್ಜಿಕುಟ್ಟಿರ ಕುಟುಂಬದ ಮುಖ್ಯಸ್ಥರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ, ಅಜ್ಜಿಕುಟ್ಟಿರ ಕುಟುಂಬಸ್ಥರೇ ಆಗಿರುವ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಹಾಗೂ ಅವರ ಸಹೋದರ ಹಾಗೂ ಮುಂಬರುವ ಅಜ್ಜಿಕುಟ್ಟಿರ ಕುಟುಂಬಸ್ಥರು ಆಯೋಜಿಸುವ ಕೊಡವ ಕೌಟಿಂಬಿಕ ಹಾಕಿ ಪಂದ್ಯಾಟದ ಅಧ್ಯಕ್ಷರೂ ಆದ ಅಜ್ಜಿಕುಟ್ಟಿರ ನರೇನ್ ಎಸ್. ಕಾರ್ಯಪ್ಪ ರವರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಕುಟುಂಬಸ್ಥರ ಹಾಗೂ ಕುಟುಂಬದ ಏಳಿಗೆಗಾಗಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಹಾಗೂ ಅಜ್ಜಿಕುಟ್ಟಿರ ಕುಟುಂಬಸ್ಥರ ನೇತೃತ್ವದಲ್ಲಿ ಆಯೋಜನೆಗೊಳ್ಳಲಿರುವ ವಾರ್ಷಿಕ ಕೌಟುಂಬಿಕ ಹಾಕಿ ಪಂದ್ಯಾಟದ ರೂಪುರೇಷ ಗಳ ಬಗ್ಗೆ ದೀರ್ಘವಾಗಿ ಚರ್ಚಿಸಲಾಯಿತು. ಕುಟುಂಬ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.