Kodagu

ಭಾರತ್ ಜೋಡೊ ಯುವ ಸಂಘಕ್ಕೆ ವಾರ್ಷಿಕ 10 ಲಕ್ಷ ಅನುದಾನ: ಜಮ್ಮಡ ಸೋಮಣ್ಣ

admincoorgdaily

ಭಾರತ್ ಜೋಡೊ ಯುವ ಸಂಘಕ್ಕೆ ವಾರ್ಷಿಕ 10 ಲಕ್ಷ ಅನುದಾನ: ಜಮ್ಮಡ ಸೋಮಣ್ಣ

ಮಡಿಕೇರಿ:‌ರಾಜ್ಯ ಸರ್ಕಾರದ ಭಾರತ್ ಜೋಡೊ ಯುವ ಸಂಘಕ್ಕೆ ಪ್ರತಿ ಘಟಕಕ್ಕೆ ವಾರ್ಷಿಕ 10 ಲಕ್ಷ ರೂ. ಅನುದಾನ ಸಿಗಲಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ ತಿಳಿಸಿದರು.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 100-200 ಸದಸ್ಯರೊಂದಿಗೆ ಸಂಘ ರಚನೆಯಾಗಲಿದ್ದು, ಸದಸ್ಯತ್ವಕ್ಕೆ 10 ರೂ. ಶುಲ್ಕ ಮತ್ತು ಆಧಾರ್ ಕಡ್ಡಾಯವಾಗಿದೆ. 16-35 ವರ್ಷದವರು ಅರ್ಹರಾಗಿದ್ದು, ಗ್ರಾಮ ಒನ್, ಕರ್ನಾಟಕ ಒನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದರು.

ಪ್ರಧಾನ ಕಾರ್ಯದರ್ಶಿ ಎಂ.ಎ.ಹಕೀಂ ಮಾತನಾಡಿ, ಪ್ರತಿ ಸಂಘಕ್ಕೆ ತರಬೇತುದಾರರ ಗೌರವಧನವಾಗಿ 24 ಸಾವಿರ ರೂ. ನೀಡಲಾಗುತ್ತದೆ. ಪಟ್ಟಣ ಪಂಚಾಯಿತಿಯಲ್ಲಿ 4 ಸಾವಿರ, ಪುರಸಭೆಯಲ್ಲಿ 6 ಸಾವಿರ, ನಗರಸಭೆಯಲ್ಲಿ 8 ಸಾವಿರ ಜನಸಂಖ್ಯೆಗೆ ಒಂದು ಸಂಘ ಸ್ಥಾಪನೆಯಾಗಲಿದೆ ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಕೆ.ಮುತ್ತಣ್ಣ, ರಾಹುಲ್ ಮಾರ್ಷಲ್, ಪ್ರಮುಖರಾದ ಹಂಸ ಕೋಡಿ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಬ್ಬೀರ್ ಉಪಸ್ಥಿತರಿದ್ದರು. ---