Kodagu

ಸೋಮವಾರಪೇಟೆಯಲ್ಲಿ ಮಾದಕ ದ್ರವ್ಯ ವಿರೋಧಿ ದಿನಾಚರಣೆ

admincoorgdaily

ಸೋಮವಾರಪೇಟೆಯಲ್ಲಿ ಮಾದಕ ದ್ರವ್ಯ ವಿರೋಧಿ ದಿನಾಚರಣೆ

ಸೋಮವಾರಪೇಟೆ, ಜೂ. 26: ಗುರುವಾರ ಪಟ್ಟಣದ ಜೆಸಿ ವೇದಿಕೆ ಮುಂಭಾಗದ ಆಟೋ ಸ್ಟ್ಯಾಂಡ್ ಬಳಿ ಸೋಮವಾರಪೇಟೆ ಪೊಲೀಸರು ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ನಡೆಸಿದರು.

ಈ ಸಂದರ್ಭ ಸಾರ್ವಜನಿಕರು, ಆಟೋ ಚಾಲಕರು ಹಾಗೂ ಯುವಕರಿಗೆ ಮಾದಕ ದ್ರವ್ಯಗಳ ಸೇವನೆಯಿಂದ ಆಗುವ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ದುಷ್ಪರಿಣಾಮಗಳ ಬಗ್ಗೆ ಪೊಲೀಸರು ಜಾಗೃತಿ ಮೂಡಿಸಿದರು. ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಠಾಣೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ಥಳೀಯರು ಭಾಗವಹಿಸಿದ್ದರು.