ಅನ್ವಾರುಲ್ ಹುದಾ ಪಬ್ಲಿಕ್ ‘ಪ್ಯಾರಡೈಸ್ ಅಲಿಫ್ ಡೇ’ ಆಚರಣೆ

Jun 11, 2026 - 15:06
 0  186
ಅನ್ವಾರುಲ್ ಹುದಾ ಪಬ್ಲಿಕ್  ‘ಪ್ಯಾರಡೈಸ್ ಅಲಿಫ್ ಡೇ’ ಆಚರಣೆ

ವಿರಾಜಪೇಟೆ: ಅನ್ವಾರುಲ್ ಹುದಾ ಪಬ್ಲಿಕ್ ಸ್ಕೂಲ್‌ನ ಪ್ಯಾರಡೈಸ್ ಜೂನಿಯರ್ ಸ್ಕೂಲ್ ವತಿಯಿಂದ ಪ್ರೀ-ಕೆಜಿ, ಎಲ್‌ಕೆಜಿ ಹಾಗೂ ಯುಕೆಜಿ ವಿದ್ಯಾರ್ಥಿಗಳಿಗಾಗಿ ‘ಪ್ಯಾರಡೈಸ್ ಅಲಿಫ್ ಡೇ 2026’ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ಅನ್ವಾರುಲ್ ಹುದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶೈಖುನಾ ಮುಹಮ್ಮದ್ ಅಶ್ರಫ್ ಅಹ್ಸಾನಿ ಉದ್ಘಾಟಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಯುಕೆಜಿ ವಿದ್ಯಾರ್ಥಿ ಮೊಹಮ್ಮದ್ ಇಝಾನ್ ಪವಿತ್ರ ಕುರ್‌ಆನ್ ಪಠಣ ನೆರವೇರಿಸಿದರು. ಅಝ್ಹರಿ ಉಸ್ತಾದ್ ಸ್ವಾಗತ ಭಾಷಣ ಮಾಡಿದರು.

ಶಾಲೆಯ ಪ್ರಾಂಶುಪಾಲರಾದ ಹಸೈನಾರ್ ಎನ್ ಮಾತನಾಡಿ, ಬಾಲ್ಯದಲ್ಲಿಯೇ ಧಾರ್ಮಿಕ ಹಾಗೂ ನೈತಿಕ ಮೌಲ್ಯಗಳೊಂದಿಗೆ ಶಿಕ್ಷಣ ನೀಡುವುದು ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶೈಖುನಾ ಹಸನ್ ಉಸ್ತಾದ್ ವಯನಾಡ್, ಸಮಸ್ತ ಕೇರಳ ಜಮೀಯತುಲ್ ಉಲಮಾ ಮುಶಾವರ ಸದಸ್ಯರು, ಮಕ್ಕಳಿಗೆ ಮೊದಲ ‘ಅಲಿಫ್’ ಅಕ್ಷರವನ್ನು ಬರೆಸುವ ಮೂಲಕ ಜ್ಞಾನಾರ್ಜನೆಯ ಪವಿತ್ರ ಪಯಣಕ್ಕೆ ಚಾಲನೆ ನೀಡಿದರು. ತಮ್ಮ ಭಾಷಣದಲ್ಲಿ ಶಿಕ್ಷಣದ ಮಹತ್ವ ಹಾಗೂ ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವ ಅಗತ್ಯವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಪುಟಾಣಿ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ನೆರೆದಿದ್ದವರ ಮೆಚ್ಚುಗೆಗೆ ಪಾತ್ರರಾದರು. ಪೋಷಕರು ಹಾಗೂ ಅತಿಥಿಗಳು ಮಕ್ಕಳ ಪ್ರತಿಭೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮದ ವಂದನಾರ್ಪಣೆಯನ್ನು ಆಶಿಕ್ ಶರೀಫ್ ಎಂ.ಎಸ್. ನೆರವೇರಿಸಿದರು. ಶಿಕ್ಷಕರು, ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0