State News

ದೃಶ್ಯಕಲೆಯಲ್ಲಿ 2025-26 ನೇ ಶೈಕ್ಷಣಿಕ ಸಾಲಿಗೆ ಪ್ರಥಮ ಬಿ.ವಿ.ಎ ಪದವಿ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ

admincoorgdaily

ಮಡಿಕೇರಿ:ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜನೆಗೊಂಡಿರುವ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ) ಸಿದ್ದಾರ್ಥನಗರ, ಮೈಸೂರು ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ-2 ಮತ್ತು 3 ರಲ್ಲಿ ಉತ್ತೀರ್ಣರಾದ ಹಾಗೂ ದ್ವಿತೀಯ ಪಿಯುಸಿ ಗೆ ಸಮಾನಾಂತರ ಕೋರ್ಸು ಮಾಡಿದ ವಿದ್ಯಾರ್ಥಿಗಳು ಬ್ಯಾಚುಲರ್ ಆಫ್ ವಿಜ್ಯುಯಲ್ ಆಟ್ರ್ಸ್ (ಬಿ.ವಿ.ಎ) [ನಾಲ್ಕು ವರ್ಷದ ಎಂಟು ಸೆಮಿಸ್ಟರ್ ಎಸ್.ಇ.ಪಿ ಪದ್ದತಿ] ದೃಶ್ಯಕಲೆಯಲ್ಲಿ 2025-26 ನೇ ಶೈಕ್ಷಣಿಕ ಸಾಲಿಗೆ ಪ್ರಥಮ ಬಿ.ವಿ.ಎ ಪದವಿ ಪ್ರವೇಶಾತಿಗಾಗಿ ಬಾಕಿ ಉಳಿದಿರುವ ಸೀಟುಗಳಿಗೆ ಮೈಸೂರು ವಿಶ್ವವಿದ್ಯಾನಿಲಯದ ಅಧಿಸೂಚನೆ ಸಂಖ್ಯೆ: ಎಸಿ-4/01/2025-26 ದಿನಾಂಕ ಜುಲೈ 08 ರನ್ವಯ ಪ್ರವೇಶಾತಿಗೆ ಅವಕಾಶ ಕಲ್ಪಸಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಪದವಿಯಲ್ಲಿ 3 ನೇ ಸೆಮಿಸ್ಟರ್ ನಿಂದ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ ಕಲೆ (ಅಚ್ಚುಕಲೆ), ಅನ್ವಯಕಲೆ ಕಲಾ ಇತಿಹಾಸ ಹಾಗೂ ಛಾಯಾಚಿತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ ವಿಭಾಗಳಲ್ಲಿ ವಿಶೇಷ ಅಧ್ಯಯನದ ಸ್ನಾತಕ ಪದವಿಯಾಗಿದೆ. ಅರ್ಜಿ ಸಲ್ಲಿಸಲು ಜುಲೈ 30 ರಂದು ಅಂತಿಮ ದಿನಾಂಕವಾಗಿದ್ದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರವೇಶಾತಿಗಾಗಿ ಅರ್ಹತಾ ಪರೀಕ್ಷೆಯ ದಿನಾಂಕ ಮತ್ತು ಇತರೆ ಮಾಹಿತಿಯನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗೆ ಈ ಕಾರ್ಯಾಲಯದ ಸಹಾಯವಾಣಿಗೆ ಕಚೇರಿ ಸಮಯದಲ್ಲಿ 0821-2438931 ಯನ್ನು ಸಂಪರ್ಕಿಸಬಹುದು ಹಾಗೆಯೇ ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಸರ್ಕಾರದ ಅಂತರ್ಜಾಲ ವಿಳಾಸ (htts://uucms.karnataka.gov.in) ಅಥವಾ https:www.cavamysore.karnataka.gov.in ನ್ನು ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ ಎಂದು ಮೈಸೂರು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು ಕಾವಾ, ಡೀನ್ ಅವರು ತಿಳಿಸಿದ್ದಾರೆ.