ಕುಶಾಲನಗರದ ಪಿಎಂಶ್ರೀ ಶಾಲೆಗೆ ಶಿಕ್ಷಕರ ಹುದ್ದಗೆ ಅರ್ಜಿಗೆ ಆಹ್ವಾನ
ಮಡಿಕೇರಿ ಜೂ.25:-ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ (ಪಿಎಂಶ್ರೀ) ಶಾಲೆಗೆ 2026-27 ನೇ ಸಾಲಿಗೆ ಕಂಪ್ಯೂಟರ್ ಶಿಕ್ಷಕರು, ಯೋಗ ಮತ್ತು ಕರಾಟೆ ಶಿಕ್ಷಕರು, ಸಂಗೀತ ಮತ್ತು ನೃತ್ಯ ಶಿಕ್ಷಕರು ಹಾಗೂ ಭದ್ರತಾ ಸಿಬ್ಬಂದಿಯ ನೇಮಕಾತಿಗಾಗಿ ತಾತ್ಕಾಲಿಕವಾಗಿ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಂಪ್ಯೂಟರ್ ಶಿಕ್ಷಕರ ವಿದ್ಯಾರ್ಹತೆ ಬಿಸಿಎ/ಬಿಎಸ್‍ಸಿ, ಬಿಟೆಕ್/ಬಿಇ(ಐಟಿ/ಸಿಎಸ್/ಡಿಪ್ಲೋಮಾ) ಹೊಂದಿರಬೇಕು, ಯೋಗ, ಕರಾಟೆ, ಸಂಗೀತ ಮತ್ತು ನೃತ್ಯ ಶಿಕ್ಷಕರು ಮಾನ್ಯತೆ ಪಡೆದ ಸಂಸ್ಥೆಗಳಿಂದ ತರಬೇತಿ ಹೊಂದಿರಬೇಕು. ಆಸಕ್ತ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಮೂಲ ದಾಖಲೆಗಳೊಂದಿಗೆ ಶಾಲಾ ಕಚೇರಿಗೆ ಖುದ್ದಾಗಿ ಭೇಟಿ ನೀಡಬೇಕು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ಗೌರವ ಧನವನ್ನು ನೀಡಲಾಗುವುದು. ಅರ್ಜಿ ಸಲ್ಲಿಸಲು ಜುಲೈ, 1 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಮುಖ್ಯ ಶಿಕ್ಷಕರು, ಪಿ.ಎಂ.ಶ್ರೀ ಶಾಲೆ, ಕುಶಾಲನಗರ ಸಂಪರ್ಕಿಸಬಹುದಾಗಿದೆ ಎಂದು ಕುಶಾಲನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಭಾಗ್ಯಮ್ಮ ಕೆ. ಅವರು ತಿಳಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
