Kodagu

ಮೂರ್ನಾಡು ಪಿ.ಎಂ.ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಗೆ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

admincoorgdaily

ಮೂರ್ನಾಡು ಪಿ.ಎಂ.ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಗೆ ಶಿಕ್ಷಕರ  ನೇಮಕಾತಿಗೆ ಅರ್ಜಿ ಆಹ್ವಾನ

ಮಡಿಕೇರಿ:-ಮೂರ್ನಾಡು ಪಿ.ಎಂ.ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಗೆ 2026-27ನೇ ಸಾಲಿಗೆ ಪೂರ್ವ ಪ್ರಾರ್ಥಮಿಕ ಶಿಕ್ಷಕರು, ಕಂಪ್ಯೂಟರ್ ಶಿಕ್ಷಕರು, ಯೋಗ ಮತ್ತು ಕರಾಟೆ ಶಿಕ್ಷಕರು, ಸಂಗೀತ ಮತ್ತು ನೃತ್ಯ ಶಿಕ್ಷಕರು ಹಾಗೂ ಭದ್ರತಾ ಸಿಬ್ಬಂದಿಯ ನೇಮಕಾತಿಗಾಗಿ ತಾತ್ಕಾಲಿಕವಾಗಿ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

       ಪೂರ್ವ ಪ್ರಾರ್ಥಮಿಕ ಶಿಕ್ಷಕರ ವಿದ್ಯಾರ್ಹತೆ ಮೊಂಟೆಸರಿ/ಡಿಇಡಿ ವಿದ್ಯಾರ್ಹತೆ ಎಸ್‍ಎಸ್‍ಎಲ್‍ಸಿ ಉತ್ತೀರ್ಣ ಹೊಂದಿರಬೇಕು, ಕಂಪ್ಯೂಟರ್ ಶಿಕ್ಷಕರ ವಿದ್ಯಾರ್ಹತೆ ಬಿಸಿಎ/ಬಿಎಸ್‍ಸಿ/ಬಿಟೆಕ್/ಬಿಇ(ಐಟಿ/ಸಿಎಸ್/ಡಿಪ್ಲೊಮ), ಯೋಗ, ಕರಾಟೆ, ಸಂಗೀತ ಮತ್ತು ನೃತ್ಯ ಶಿಕ್ಷಕರು ಮಾನ್ಯತೆ ಪಡೆದ ಸಂಸ್ಥೆಗಳಿಂದ ತರಬೇತಿ ಹೊಂದಿರಬೇಕು.

       ಆಸಕ್ತ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಮೂಲ ದಾಖಲೆಗಳೊಂದಿಗೆ ಶಾಲಾ ಕಚೇರಿಗೆ ಖುದ್ದಾಗಿ ಭೇಟಿ ನೀಡಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ಗೌರವಧನ ನೀಡಲಾಗುವುದು. ಅರ್ಜಿ ಸಲ್ಲಿಸಲು ಜುಲೈ, 2, 2026 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮುಖ್ಯ ಶಿಕ್ಷಕರು, ಪಿ.ಎಂ.ಶ್ರೀ ಕರ್ನಾಟಕ ಪಬ್ಲಿಕ್ ಶಾಲೆ, ಮೂರ್ನಾಡು ಸಂಪರ್ಕಿಸಬಹುದು ಎಂದು ಮೂರ್ನಾಡು ಪಿ.ಎಂ.ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಕಟಣೆ ತಿಳಿಸಿದೆ.