ಗ್ರಾಮೀಣ ರೈತ ಮಹಿಳೆಯರಿಗೆ ಐದು ವಾರದ ನಾಟಿ ಕೋಳಿ ಮರಿ ವಿತರಿಸಲು ಅರ್ಜಿ ಆಹ್ವಾನ

Nov 20, 2025 - 01:37
 0  1.7k
ಗ್ರಾಮೀಣ ರೈತ ಮಹಿಳೆಯರಿಗೆ ಐದು ವಾರದ ನಾಟಿ ಕೋಳಿ ಮರಿ ವಿತರಿಸಲು ಅರ್ಜಿ ಆಹ್ವಾನ

ಮಡಿಕೇರಿ :-ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ ಮೈಸೂರು ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ 2025-26 ನೇ ಸಾಲಿನಲ್ಲಿ ಗ್ರಾಮೀಣ ರೈತ ಮಹಿಳೆಯರಿಗೆ ಐದು ವಾರದ ನಾಟಿ ಕೋಳಿ ಮರಿ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.

 ಈ ಯೋಜನೆಯಡಿ ಜಿಲ್ಲೆಯ ಮಡಿಕೇರಿ ತಾಲ್ಲೂಕಿಗೆ ಮಾತ್ರ 99 (ಪರಿಶಿಷ್ಟ ಜಾತಿ-ಶೇ.17, ಪರಿಶಿಷ್ಟ ಪಂಗಂಡ ಶೇ.7, ಹಿಂದುಳಿದ ವರ್ಗ-ಶೇ.32, ಸಾಮಾನ್ಯ -ಶೇ.44) ಗುರಿ ನಿಗಧಿಯಾಗಿದ್ದು ಮಿಸಲಾತಿ ಅನ್ವಯ ಆಯ್ಕೆಯಾಗುವ ಪ್ರತಿ ಫಲಾನುಭವಿಗಳಿಗೆ ಐದು ವಾರದ ನಾಟಿ ಕೋಳಿ ಮರಿಗಳನ್ನು ಉಚಿತವಾಗಿ ವಿತರಣೆ ಮಾಡಲಾಗುವುದು.

ಆಸಕ್ತ ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ಮಡಿಕೇರಿ 9449083876, ಇವರನ್ನು ಸಂಪರ್ಕಿಸುವಂತೆ ಕೋರಿದೆ. ಅರ್ಜಿಗಳನ್ನು ಭರ್ತಿಮಾಡಿ ಡಿಸೆಂಬರ್, 04 ರೊಳಗೆ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವೆಗಳು ಇಲಾಖೆಯ ಉಪ ನಿರ್ದೇಶಕರಾದ ಲಿಂಗರಾಜ ದೊಡ್ಡಮನಿ ಅವರು ತಿಳಿಸಿದ್ದಾರೆ.

What's Your Reaction?

Like Like 5
Dislike Dislike 0
Love Love 2
Funny Funny 0
Angry Angry 1
Sad Sad 1
Wow Wow 0