ರೋಟರಿ ಸಂಸ್ಥೆಗೆ ಸಹಾಯಕ ಗವನ೯ರ್ ಗಳ ನೇಮಕ
admincoorgdaily

ಮಡಿಕೇರಿ,ಜೂನ್ 30: ರೋಟರಿ ಜಿಲ್ಲೆ 3181 ನ ವಲಯ 6 ರ ಸಹಾಯಕ ಗವನ೯ರ್ ಗಳಾಗಿ ಕೊಡಗಿನ ರೋಟರಿ ಸಂಸ್ಥೆಗಳಿಗೆ ಮೂವರು ಸಹಾಯಕ ಗವವ೯ರ್ ಗಳನ್ನು ನೇಕ ಮಾಡಲಾಗಿದೆ.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್, ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ ರೋಟರಿ ಸಂಸ್ಥೆಗಳಿಗೆ ಸಹಾಯಕ ಗವನ೯ರ್ ಆಗಿ ಶನಿವಾರಸಂತೆ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಎಚ್.ಎಸ್. ವಸಂತ್ ಕುಮಾರ್, ಕುಶಾಲನಗರ, ಆಲೂರು ಸಿದ್ದಾಪುರ, ಮಡಿಕೇರಿ ವುಡ್ಸ್, ಮಡಿಕೇರಿ ರೋಟರಿ ಸಂಸ್ಥೆಗಳಿಗೆ ಕುಶಾಲನಗರ ರೋಟರಿ ಸಂಸ್ಥೆಯಎಂ.ಡಿ. ರಂಗಸ್ವಾಮಿ, ವೀರಾಜಪೇಟೆ, ಗೋಣಿಕೊಪ್ಪ, ಪಿರಿಯಾಪಟ್ಟಣ ಐಕಾನ್ ರೋಟರಿ ಸಂಸ್ಥೆಗಳಿಗೆ ಪಿರಿಯಾಪಟ್ಟಣ ರೋಟರಿ ಐಕಾನ್ ಸಂಸ್ಥೆಯ ಸಿ.ಎನ್. ವಿಜಯ್ ಅವರನ್ನು ರೋಟರಿ ಜಿಲ್ಲೆ 3181 ನಿಂದ ನೇಮಕ ಮಾಡಲಾಗಿದೆ.