ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೇಮಕ

Dec 2, 2025 - 18:03
 0  146
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೇಮಕ

ಮಡಿಕೇರಿ: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿಯಾಗಿ ನಿರ್ದೇಶಕರಾಗಿ ಚುನಾಯಿತಗೊಂಡಿದ್ದ ಸುನಿಲ್ ಪೊನ್ನೇಟ್ಟಿ ಅವರನ್ನು ನೇಮಕ ಮಾಡಲಾಯಿತು. ಸಂಘದ ಅಧ್ಯಕ್ಷರಾದ ಬಾಚರಣಿಯಂಡ ಅನು ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಖಾಲಿಯಿದ್ದ ಖಜಾಂಚಿ ಹಾಗೂ ವಿವಿಧ ಸ್ಥಾನಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯಿತು.

ರಾಷ್ಟ್ರೀಯ ಸಮಿತಿ ಸದಸ್ಯರಾಗಿ ಪಳೆಯಂಡ ಪಾರ್ಥ ಚಿಣ್ಣಪ್ಪ, ಖಜಾಂಚಿ ಆಯ್ಕೆಯಿಂದ ತೆರವಾಗಿದ್ದ ನಿರ್ದೇಶಕ ಸ್ಥಾನಕ್ಕೆ ಕೆ. ಶಿವಕುಮಾರ್, ನಾಮನಿರ್ದೇಶಿತ ಸದಸ್ಯರುಗಳಾಗಿ ಬೊಳ್ಳಜಿರ ಅಯ್ಯಪ್ಪ, ರಾಜು ರೈ ಹಾಗೂ ವಿ.ವಿ. ಅರುಣ್ ಕುಮಾರ್ ಅವರನ್ನು ನೇಮಿಸಲಾಯಿತು.

ಉಪಸಮಿತಿ ರಚನೆ : ಸಂಘದ ಕ್ರೀಡಾ ಸಮಿತಿ ಸಂಚಾಲಕರಾಗಿ ಸಂತೋಷ್ ರೈ, ಸಹ ಸಂಚಾಲಕರಾಗಿ ರಿಜ್ವಾನ್ ಹುಸೈನ್, ನವೀನ್ ಸುವರ್ಣ, ಪತ್ರಕರ್ತರ ಸಾಂಸ್ಕೃತಿಕ ವೇದಿಕೆ ಸಂಚಾಲಕರಾಗಿ ಟಿ.ಆರ್. ಪ್ರಭುದೇವ್, ಸಹ ಸಂಚಾಲಕರಾಗಿ ಮಲ್ಲಿಕಾರ್ಜುನ್, ಪ್ರವಾಸ ಸಮಿತಿ ಸಂಚಾಲಕರಾಗಿ ಅಜ್ಜಮಾಡ ರಮೇಶ್ ಕುಟ್ಟಪ್ಪ, ಸಹ ಸಂಚಾಲಕರಾಗಿ ರೆಜಿತ್ ಕುಮಾರ್, ಆರ್. ಸುಬ್ರಮಣಿ, ಕಾರ್ಯಚಟುವಟಿಕೆ ಸಮಿತಿ ಸಂಚಾಲಕರಾಗಿ ಜಿ.ಆರ್. ಪ್ರಜ್ವಲ್, ಸಹ ಸಂಚಾಲಕರಾಗಿ ಜೈರುಸ್ ಥೋಮಸ್ ಅಲೆಗ್ಸಾಂಡರ್, ವಿಷ್ಮಾ ಪೆಮ್ಮಯ್ಯ ಅವರನ್ನು ನೇಮಕ ಮಾಡಲಾಯಿತು.

 ಸಭೆಯಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ, ರಾಜ್ಯ ಸಮಿತಿ ನಿರ್ದೇಶಕರಾದ ಬಿ.ಆರ್. ಸವಿತಾ ರೈ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಜೆ. ರಾಕೇಶ್ ಸೇರಿದಂತೆ ಪದಾಧಿಕಾರಿಗಳು, ನಿರ್ದೇಶಕರುಗಳು, ತಾಲೂಕು ಘಟಕಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0