ಕಸ್ತೂರಿಬಾ ಮೆಡಿಕಲ್ ಕಾಲೇಜಿನಲ್ಲಿ ಉನ್ನತ ಶ್ರೇಣಿಯಲ್ಲಿ ಎಂಬಿಬಿಎಸ್ ಪದವಿ ಪಡೆದ ಅಪ್ಸಲ್ ಶರೀಫ್

May 18, 2026 - 10:58
May 18, 2026 - 11:15
 0  420
ಕಸ್ತೂರಿಬಾ ಮೆಡಿಕಲ್ ಕಾಲೇಜಿನಲ್ಲಿ ಉನ್ನತ ಶ್ರೇಣಿಯಲ್ಲಿ ಎಂಬಿಬಿಎಸ್ ಪದವಿ ಪಡೆದ ಅಪ್ಸಲ್ ಶರೀಫ್

ಮಡಿಕೇರಿ:- ಮಂಗಳೂರಿನ ಪ್ರತಿಷ್ಠಿತ ಕಸ್ತೂರಿಬಾ ಮೆಡಿಕಲ್ ಕಾಲೇಜ್ ನಲ್ಲಿ ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಿ ಎಂಬಿಬಿಎಸ್ ಪದವಿಯನ್ನು ಉನ್ನತ ಶ್ರೇಣಿಯಲ್ಲಿ  ಅಪ್ಸಲ್ ಶರೀಫ್ ತೇರ್ಗಡೆಗೊಂಡಿದ್ದಾರೆ.

 ಇವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮಡಿಕೇರಿಯ ಕ್ರೆಸೆಂಟ್ ಸ್ಕೂಲ್ ಹಾಗೂ ಕೊಡಗು ವಿದ್ಯಾಲಯದಲ್ಲಿ ಪೂರ್ಣಗೊಳಿಸಿದ್ದು, ಬಳಿಕ ಪಿಯುಸಿ ಶಿಕ್ಷಣವನ್ನು ಗ್ರೀನ್ ವ್ಯಾಲಿಯು ಪಿಯು ಕಾಲೇಜು ಶಿರೂರು ಭಟ್ಕಳದಲ್ಲಿ ಯಶಸ್ವಿಯಾಗಿ ಮುಗಿಸಿರುತ್ತಾರೆ.

ವಿದ್ಯಾರ್ಥಿ ಜೀವನದಿಂದಲೇ ಶಿಸ್ತು, ಪರಿಶ್ರಮ ಹಾಗೂ ವಿದ್ಯಾಭ್ಯಾಸದ ಮೇಲಿನ ಅಪಾರ ಆಸಕ್ತಿ ಹೊಂದಿದ್ದ ಅಪ್ಸಲ್ ಶರೀಫ್ ಅವರು ಇದೀಗ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.

ಇವರು ಮೂಲತಃ ಕೊಡಗು ಜಿಲ್ಲೆಯ ಸಂಪಾಜೆ ನಿವಾಸಿಗಳಾದ ದಿ. ಅಬೂಬಕ್ಕರ್ ಹಾಜಿ ಹಾಗೂ ಮರಿಯಮ್ಮ ರವರ ಮೊಮ್ಮಗರಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಅಡ್ಕಾರ್‌ನ ದಿ. ಅಬೂಬಕ್ಕರ್ ಮತ್ತು ಆಸಿಯಮ್ಮ ರವರ ಮೊಮ್ಮಗರೂ ಆಗಿರುತ್ತಾರೆ. ಅಲ್ಲದೇ ಅಬ್ದುಲ್ಲಾ ಅಡ್ಕಾರ್ ಹಾಗೂ ಕೊಯನಾಡು ನಫೀಸ ದಂಪತಿಗಳ ಪುತ್ರರಾಗಿರುವ ಅಪ್ಸಲ್ ಶರೀಫ್ ಅವರು ಪ್ರಸ್ತುತ ಮಡಿಕೇರಿ ನಿವಾಸಿಯಾಗಿದ್ದಾರೆ.

 ಸರಳ ಸ್ವಭಾವ, ವಿನಯಶೀಲತೆ ಹಾಗೂ ಕಠಿಣ ಪರಿಶ್ರಮದ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಪ್ಸಲ್ ಶರೀಫ್ ಅವರ ಈ ಯಶಸ್ಸಿಗೆ ಕುಟುಂಬಸ್ಥರು, ಬಂಧು ಬಳಗ, ಸ್ನೇಹಿತರು ಹಾಗೂ ಊರಿನವರು ಅಪಾರ ಸಂತಸ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ. ಮುಂದಿನ ದಿನಗಳಲ್ಲಿ ಉತ್ತಮ ವೈದ್ಯರಾಗಿ ಸಮಾಜಸೇವೆ ಮಾಡುವಂತಾಗಲಿ ಎಂದು ಹಾರೈಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0