Kodagu

ಅರಪಟ್ಟು ಭಗವತಿ ದೇವಸ್ಥಾನದಲ್ಲಿ ವಿಶೇಷ ಸಭೆ

admincoorgdaily

ಕಡಂಗ: ಶ್ರೀ ಅರಪಟ್ಟು ಭಗವತಿ ದೇವಸ್ಥಾನದಲ್ಲಿ, ದೇವಸ್ಥಾನದ ನೂತನ ಅಧ್ಯಕ್ಷರಾದ ಮುಕ್ಕಾಟಿರ ಶಂಕರು ಚೆಂಗಪ್ಪರವರ ಮುಂದಾಳುತ್ವದಲ್ಲಿ ವಿಶೇಷ ಸಬೆ ನಡೆಯಿತು. ಈ ಸಭೆಗೆ ಊರಿನ ಪ್ರಮುಖರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಭಗವತಿ ದೇವಸ್ಥಾನ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಹಾಗೂ ಶ್ರೀಪಟ್ಟೋಟು ಈಶ್ವರ ದೇವಸ್ಥಾನದ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಯಿತು. ದೇವಸ್ಥಾನದ ಅಭಿವೃದ್ದಿಗಾಗಿ ಸರ್ಕಾರದ ಅನುದಾನ ಪಡೆಯುವುದರ ಮೂಲಕ ಮತ್ತು ದಾನಿಗಳ ಸಹಾಕಾರದಿಂದ ದೇವಸ್ಥಾನವನ್ನು ಇನ್ನಷ್ಟು ಅಭಿವೃದ್ಧಿ ಮಾಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.