ಮಡಿಕೇರಿಯಲ್ಲಿ ನಾಳೆ ರೋಟರಿ ಸದಸ್ಯರಿಗಾಗಿ ಕಲಾಕಲರವ ಸ್ಪಧೆ೯
ಮಡಿಕೇರಿ: ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ರೋಟರಿ ಸದಸ್ಯರಿಗಾಗಿ ನ.2 ರಂದು ಭಾನುವಾರ ಕಲಾಕಲರವ ಸಾಂಸ್ಕೖತಿಕ ಸ್ಪದೆ೯ಗಳು ಆಯೋಜಿಸಲ್ಪಟ್ಟಿದೆ ಎಂದು ಸಮಿತಿ ಸಂಚಾಲಕ ಜಯಂತ್ ಪೂಜಾರಿ ತಿಳಿಸಿದ್ದಾರೆ.
ನ.2 ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ರೋಟರಿ ವಲಯ 6 ರ ಸದಸ್ಯರಿಗಾಗಿ ಆಯೋಜಿತ ಸ್ಪಧೆ೯ಗಳಿಗೆ ನಗರದ ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಕಾಲೇಜಿನಲ್ಲಿ ಪ್ರಾಂಶುಪಾಲ ಮೇಜರ್ ಬಿ. ರಾಘವ ಚಾಲನೆ ನೀಡಲಿದ್ದಾರೆ. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷರತ್ನಾಕರ್ ರೈ, ಕಾಯ೯ದಶಿ೯ ಬಿ.ಕೆ. ಕಾಯ೯ಪ್ಪ, ವಲಯ 6 ರ ಸಹಾಯಕ ಗವನ೯ರ್ ಧಿಲನ್ ಚಂಗಪ್ಪ, ರಾಜುಗೌಡ, ಉಲ್ಲಾಸ್ ಕೖಷ್ಣ . ಸಾಂಸ್ಕೖತಿಕ ಸಮಿತಿಯ ವಲಯಾಧ್ಯಕ್ಷೆ ತೋಟಂಬೈಲು ಶುಭಾಷಿಣಿ ಸೇರಿದಂತೆ ಗಣ್ಯರು ಹಾಜರಿರುತ್ತಾರೆ. ವಲಯ 6 ಕ್ಕೆ ಸೇರಿರುವ ರೋಟರಿಯ 14 ಕ್ಲಬ್ ಗಳ ಸದಸ್ಯರು, ಕುಟುಂಬ ವಗ೯ದ 220 ಸದಸ್ಯರು ಸಾಂಸ್ಕೖತಿಕ ಸ್ಪಧೆ೯ಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದೂ ಜಯಂತ್ ಪೂಜಾರಿ ಮಾಹಿತಿ ನೀಡಿದ್ದಾರೆ.