ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅರುಣ್ ಮಾಚಯ್ಯ

Oct 2, 2025 - 16:40
 0  201
ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅರುಣ್ ಮಾಚಯ್ಯ

ಬೆಂಗಳೂರು:ಕರ್ನಾಟಕ ಕ್ರೀಡಾ ಪ್ರಾಧಿಕಾರದ ನೂತನ ಉಪಾಧ್ಯಕ್ಷರಾಗಿ ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿರುವ ಅಧಿಕೃತ ಕಚೇರಿಯಲ್ಲಿ, ಚೆಪ್ಪುಡೀರ ಅರುಣ್ ಮಾಚಯ್ಯರವರು ಅಧಿಕಾರ ಸ್ವೀಕರಿಸಿದರು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್ ಭೋಸ ರಾಜು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ, ಕಾಂಚನ್ ಪೊನ್ನಣ್ಣ ರವರು ಹಾಗೂ ಕಾಂಗ್ರೆಸ್ ಮುಖಂಡರುಗಳು, ಕ್ರೀಡಾ ಇಲಾಖೆಯ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಕಚೇರಿಗೆ ಪ್ರವೇಶಿಸಿದ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರನ್ನು ಗಣ್ಯರು ಹೂಗುಚ್ಛ ನೀಡುವ ಮೂಲಕ ಅಭಿನಂದಿಸಿದರು. ಉಸ್ತುವಾರಿ ಸಚಿವರು ಹಾಗೂ ಎ.ಎಸ್ ಪೊನ್ನಣ್ಣ ದಂಪತಿಗಳು ನೂತನ ಉಪಾಧ್ಯಕ್ಷರಿಗೆ ಯಶಸ್ಸಿನ ಶುಭಾಶಯಗಳು ಕೋರಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0