ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಕೊಡುಗೆ ನೀಡಿದ ಆಶಿಕ ಪೃಥ್ವಿ ಹಾಗೂ ಸ್ನೇಹಿತರು

Jul 26, 2026 - 14:24
 0  179
ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಕೊಡುಗೆ ನೀಡಿದ ಆಶಿಕ ಪೃಥ್ವಿ ಹಾಗೂ ಸ್ನೇಹಿತರು

ವಿರಾಜಪೇಟೆ: ಮೂಲತಃ ವಿ ಬಾಡಗ ಗ್ರಾಮದ ನಿವಾಸಿಯೂ ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಮಳವಂಡ ಆಶಿಕ ಪೃಥ್ವಿ ಹಾಗೂ ಅವರ ಸ್ನೇಹಿತರು ಉದಾರ ಮನಸ್ಸಿನಿಂದ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ವಿದ್ಯಾರ್ಥಿಗಳ ವ್ಯಾಸಂಗಕ್ಕೆ ನೆರವಾಗುವ ನಿಟ್ಟಿನಲ್ಲಿ ಈ ಸಾಮಾಜಿಕ ಸೇವೆಯನ್ನು ಕೈಗೊಂಡ ಮಳವಂಡ ಆಶಿಕ ಪೃಥ್ವಿ ಮತ್ತು ಅವರ ಮಿತ್ರವೃಂದಕ್ಕೆ ಶಾಲೆಯ ಶಿಕ್ಷಕ ವೃಂದ, ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳು ಶ್ಲಾಘನೆ ವ್ಯಕ್ತಪಡಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0