ಬಾಡಗರಕೇರಿಯ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಜು.6ರಿಂದ 9ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ
admincoorgdaily

ಮಡಿಕೇರಿ: ಪೊನ್ನಂಪೇಟೆ ತಾಲೂಕಿನ ಬಾಡಗರಕೇರಿಯ ೮೦೦ ವರ್ಷ ಇತಿಹಾಸದ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಜು.೬ರಿಂದ ೯ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಚೋನಿರ ಸುಬ್ರಮಣಿ ತಿಳಿಸಿದ್ದಾರೆ. ೧.೨೦ ಕೋಟಿ ವೆಚ್ಚದಲ್ಲಿ ಗರ್ಭಗುಡಿ, ತೀರ್ಥಮಂಟಪ, ಗಣಪತಿ ಗುಡಿಯನ್ನು ಜೀರ್ಣೋದ್ಧಾರ ಮಾಡಲಾಗಿದೆ.
ವರ್ಷದ 365 ದಿನ ಇಲ್ಲಿ ಮೃತ್ಯುಂಜಯ ಹೋಮ ನಡೆಯುತ್ತದೆ. ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಉತ್ಸವ ನಡೆಯಲಿದೆ. ಜು.೬ರಂದು ಸಂಜೆ ೬ಕ್ಕೆ ಪ್ರಾರ್ಥನೆ, ವಾಸ್ತು ಹೋಮ, ಜು.೭ರಂದು ಗಣಪತಿ ಹೋಮ, ಕಲಶಾಭಿಷೇಕ, ಮಹಾಪೂಜೆ ನಡೆಯಲಿದೆ.
ಜು.೮ರಂದು ಸಂಹಾರ ತತ್ವ ಹೋಮ, ಧ್ಯಾನಾಧಿವಾಸ, ಬ್ರಹ್ಮಕಲಶಪೂಜೆ, ಜು.೯ರಂದು ಬೆಳಗ್ಗೆ ೯:೦೯ ರಿಂದ ೧೦:೨೨ರ ಸಿಂಹಲಗ್ನದಲ್ಲಿ ಬಿಂಬ ಪ್ರತಿಷ್ಠೆ, ಅಷ್ಟಬಂಧ ಲೇಪನ, ಜೀವಕಲಶಾಭಿಷೇಕ, ೧:೩೦ಕ್ಕೆ ಮಹಾಪೂಜೆ ನಡೆಯಲಿದೆ. ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ದೇವತಕ್ಕ ಅಣ್ಣಿರ ದಾದಾ ಗಣಪತಿ, ನಾಡತಕ್ಕ ಕಾಯಪಂಡ.ಕೆ.ಅಯ್ಯಪ್ಪ ಪ್ರಮುಖರಾದ ಸ್ಟಾಲಿನ್ ಗಣಪತಿ, ಸಂಪತ್ ಇದ್ದರು.