ಕೇಳಿದ್ದು ಐದು ಯೂನಿಟ್ ರಕ್ತ! ಕೊಟ್ಟಿದ್ದು 56 ಯೂನಿಟ್ ರಕ್ತ
ವಿರಾಜಪೇಟೆ: ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳಿಂದ ರಕ್ತದ ಕೊರತೆ ಇರುವ ಕಾರಣ ವಿರಾಜಪೇಟೆಯ ಯುವಕರಲ್ಲಿ ಐದು ಯೂನಿಟ್ ರಕ್ತ ಕಾಗಿ ಮನವಿ ಮಾಡಿದ್ದೆವು.ತುರ್ತಾಗಿ ಕಾರ್ಯಪ್ರವೃತ್ತರದಂತಹ ಯುವಕರ ತಂಡ ನಾವೇ ಕ್ಯಾಂಪ್ ಮಾಡುತ್ತೇವೆ ಹೇಳಿ 50ಯೂನಿಟ್ ರಕ್ತವನ್ನು ನೀಡುತ್ತೆವೆ ಎಂದು ತಿಳಿಸಿದರು.
ಸಮಯದ ಅಭಾವ ಇದೆ ಎಂದು ತಿಳಿಸಿದಾಗ ಕೇವಲ 24 ಗಂಟೆಗಳಲ್ಲಿ ರಕ್ತ ಶಿಬಿರವನ್ನು ಆಯೋಜಿಸುತ್ತೇವೆ ಎಂದು ಭರವಸೆ ನೀಡಿದರು. ಅವರು ನೀಡಿದ ಭರವಸೆಯ ಪ್ರಕಾರ 24 ಗಂಟೆಗಳಲ್ಲಿ ಕ್ಯಾಂಪನ್ನು ಆಯೋಜಿಸಿ ಐವತ್ತಾರು ಯೂನಿಟ್ ರಕ್ತವನ್ನು ಸಂಗ್ರಹಿಸುವುದರ ಮೂಲಕ ವಿರಾಜಪೇಟೆಯಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದರು. ರಕ್ತದಾನ ಮಾಡಿದ ಸರ್ವರಿಗೂ ಸಹಕರಿಸಿದ ಜನ ಸೇವಾ ಟ್ರಸ್ಟ್ ನ ಪದಾಧಿಕಾರಿಗಳಾದ ಶರೀಫ್, ರೌಫ್, ಸಾಬಿತ್. ಫೈಝಲ್ ಅಡ್ಡು, ಮತ್ತು ಸರ್ವ ಸದಸ್ಯರಿಗೂ ಧನ್ಯವಾದಗಳನ್ನ ಮೈಕಲ್ ವೇಗಸ್ ಕೊಡಗು ಬ್ಲಡ್ ಡೋನರ್ಸ್( ರಿ) ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಲ್ಲಿಸಿದ್ದಾರೆ.