ನಾಪೋಕ್ಲುವಿನಲ್ಲಿ ನಡೆದ ಹಲ್ಲೆ ಪ್ರಕರಣ; ಸೌರ್ಹಾದತೆಯನ್ನು ಕೆಡಿಸಲು ಯತ್ನಿಸಿದವರನ್ನು ಜಿಲ್ಲೆಯಿಂದ ಗಡಿಪಾರು ಮಾಡಿ: ಅಪ್ಪಚೆಟ್ಟೋಳಂಡ ಮನುಮುತ್ತಪ್ಪ ಆಗ್ರಹ

Mar 3, 2026 - 16:52
 0  425
ನಾಪೋಕ್ಲುವಿನಲ್ಲಿ ನಡೆದ ಹಲ್ಲೆ ಪ್ರಕರಣ; ಸೌರ್ಹಾದತೆಯನ್ನು ಕೆಡಿಸಲು ಯತ್ನಿಸಿದವರನ್ನು ಜಿಲ್ಲೆಯಿಂದ ಗಡಿಪಾರು ಮಾಡಿ: ಅಪ್ಪಚೆಟ್ಟೋಳಂಡ ಮನುಮುತ್ತಪ್ಪ ಆಗ್ರಹ

ಮಡಿಕೇರಿ: ನಾಪೋಕ್ಲುವಿನಲ್ಲಿ ನಡೆದ ಹಲ್ಲೆ ಪ್ರಕರಣ ಮೂಲಕ ಸೌರ್ಹಾದತೆಯನ್ನು ಕೆಡಿಸಲು ಯತ್ನಿಸಿದವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಬಿಜೆಪಿ ಮುಖಂಡ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ ಆಗ್ರಹಿಸಿದರು.

ಅಂದು ಗೌತಮ್ ಹಿಂದೂ ಸಂಗಮ ಕಾರ್ಯಕ್ರಮ ನಿಮಿತ್ತ ತನ್ನ ವಾಹನಕ್ಕೆ ಭಗವಾ ಧ್ವಜವನ್ನು ಕಟ್ಟಿ ವಾಹನದಲ್ಲಿ ಪ್ರಚಾರ ಮಾಡುತ್ತಿದ್ದರು. ಈ ಸಂದರ್ಭ ಆಲ್ಟೋ ಕಾರಿನಲ್ಲಿ ಬಂದ ಅನ್ಯಕೋಮಿನ ಯುವಕರು ಭಾವುಟ ಕಟ್ಟಲು ಎಷ್ಟು ಧೈರ್ಯ ನಿನಗೆ. ನಾಪೋಕ್ಲು ನಮ್ಮದು ಎಂದು ಹೇಳಿ ಹಲ್ಲೆ ನಡೆಸಿದ್ದಾರೆ.

 ಈ ಸಂದರ್ಭ ಒಂದು ವರ್ಗದ ಜನ ಗಲಾಟೆಯನ್ನು ನಿಂತು ನೀಡಿದ್ದಾರೆ ವಿನಃ ಬಿಡಿಸಲು ಬರಲಿಲ್ಲ. ಈ ಸಂದರ್ಭ ಕೆಲವು ಹಿಂದೂ ಕಾರ್ಯಕರ್ತರು ಬಿಡಿಸಿದ್ದಾರೆ ಎಂದು ಮಾಹಿತಿ ನೀಡಿದ ಅವರು, ನಾಪೋಕ್ಲುವಿನಲ್ಲಿ ಇಂದು ಭಯದ ವಾತಾವರಣ ಸೃಷ್ಠಿಸುತ್ತಿದ್ದಾರೆ. ಸಾಕಷ್ಟು ಪ್ರಕರಣ ನಡೆಯುತ್ತಿದ್ದರು ಪ್ರಕರಣ ದಾಖಲಾಗುತ್ತಿಲ್ಲ ಎಂದು ದೂರಿದ ಅವರು, ಇತ್ತೀಚೆಗೆ ಹಲ್ಲೆ ಪ್ರಕರಣ ಸಂಬಂಧ ಭಾಗಿಯಾಗಿದ್ದ ಮತ್ತೊಬ್ಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೋರ್ವನಿಗೆ ಬೆದರಿಕೆ ಹಾಕಿದ್ದು ಗಮನಕ್ಕೆ ಬಂದಿದೆ. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ದಾಖಲಿಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ನಾಪೋಕ್ಲು ಗಾಂಜ ವೆಸನಿಗಳ ಗೂಡಾಗಿದೆ ಎಂದು ಆರೋಪಿಸಿದ ಅವರು, ನಾಪೋಕ್ಲು ವ್ಯಾಪ್ತಿಯಲ್ಲಿ ಬಲಿಷ್ಠವಾದ ಪೊಲೀಸ್ ಠಾಣೆ ನಿರ್ಮಾಣವಾಗಬೇಕು. ಅಕ್ರಮ ಚಟುವಟಿಕೆಯನ್ನು ಮಟ್ಟಹಾಕಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ನಾಪೋಕ್ಲು ಗ್ರಾ.ಪಂ ಸದಸ್ಯ ಪ್ರದೀಪ್, ಪಾರಾಣೆ ಗ್ರಾ.ಪಂ.ಅಧ್ಯಕ್ಷ ಕಟ್ಟಿಕುಶಾಲಪ್ಪ, ಪ್ರಮುಖರಾದ ಮಣವಟ್ಟಿರ ಹರೀಶ್ ಕುಶಾಲಪ್ಪ, ಎಸ್.ಜಗದೀಶ್, ಸಿ.ಸೋಮಣ್ಣ ಇದ್ದರು.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 0