ಪಾಲಿಬೆಟ್ಟ;ಬಟರ್ ಫ್ರೂಟ್ ಕಳ್ಳತನಕ್ಕೆ ಯತ್ನ

May 30, 2026 - 09:48
 0  1.5k
ಪಾಲಿಬೆಟ್ಟ;ಬಟರ್ ಫ್ರೂಟ್ ಕಳ್ಳತನಕ್ಕೆ ಯತ್ನ

ಮಡಿಕೇರಿ, ಮೇ 29: ಪಾಲಿಬೆಟ್ಟದ ಖಾಸಗಿ ಸಂಸ್ಥೆಗೆ ಸೇರಿದ ಮೂಕ ಕಾಫಿ ತೋಟದೊಳಗೆ ಅವಕಾಡೋ ಮರಗಳನ್ನು ಬೆಳೆದಿದ್ದು, ಅವುಗಳಲ್ಲಿ ಆಗಿದ್ದಂತಹ ಕಾಯಿಗಳನ್ನು ರಾತ್ರಿ ಸಮಯದಲ್ಲಿ ನುಗ್ಗಿ ಕಳ್ಳತನ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಗಸ್ತು ತಿರುಗುತ್ತಿದ್ದ ಸಿಬ್ಬಂದಿ ಮತ್ತು ಕಾವಲುಗಾರರನ್ನು ಕಂಡ ಕಳ್ಳರು ಕೊಯ್ದು ಮಾಡಿ ಇಟ್ಟಿದ್ದ ಅವಕಾಡೊ ಕಾಯಿಗಳನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾದರು.

ಈ ಬಗ್ಗೆ ಖಾಸಗಿ ಸಂಸ್ಥೆ ಕಾಫಿ ತೋಟದ ಸಹಾಯಕ ವ್ಯವಸ್ಥಾಪಕ ಸಂಪತ್ ಪಿ.ಎಂ. ಎಂಬವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಿದ್ದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 ಕಳೆದ ವರ್ಷ ಕೂಡ ಈ ಭಾಗದ ಖಾಸಗಿ ಸಂಸ್ಥೆಯ ಕಾಫಿ ತೋಟಗಳಿಂದ ಅವಕಾಡೊ ಕಾಯಿಗಳನ್ನು ಕಳ್ಳತನ ಮಾಡಿರುವ ಬಗ್ಗೆ ದೂರು ದಾಖಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಈ ಕಾಯಿಗಳಿಗೆ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಕಳ್ಳತನ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

What's Your Reaction?

Like Like 1
Dislike Dislike 0
Love Love 0
Funny Funny 1
Angry Angry 0
Sad Sad 1
Wow Wow 0