ರಸಗೊಬ್ಬರ ಮಾರಾಟಗಾರರ ಗಮನಕ್ಕೆ
ಮಡಿಕೇರಿ:-ಕೊಡಗು ಜಿಲ್ಲೆಯ ಕೃಷಿ ಇಲಾಖೆ ವತಿಯಿಂದ ಜಪ್ತು ಮಾಡಲಾಗಿದ್ದ 147 ಚೀಲ ಎನ್‍ಪಿಕೆ 17:17:17 ಮಿಕ್ಸರ್ ರಸಗೊಬ್ಬರವನ್ನು ಜಿಲ್ಲಾಧಿಕಾರಿಗಳು ಜಿಲ್ಲಾ ದಂಡಾಧಿಕಾರಿ ಅವರ ಆದೇಶದನ್ವಯ ವಿಶ್ಲೇಷಣೆ ನಂತರದ ಪೋಷಕಾಂಶಗಳ ಆಧಾರದ ಮೇಲೆ ದರ ಮರು ನಿಗದಿಪಡಿಸಿ ವಿಲೇ ಮಾಡಲು ಇಡಲಾಗಿದೆ.
ರಸಗೊಬ್ಬರ (ನಿರವಯವ, ಸಾವಯವ ಅಥವಾ ಮಿಶ್ರಿತ) (ನಿಯಂತ್ರಣ) ಆದೇಶ, 1985(ಎಫ್‍ಸಿಒ-1985) ರನ್ವಯ ಜಪ್ತು ಮಾಡಲಾದ ರಸಗೊಬ್ಬರವನ್ನು ಸಕ್ಷಮ ಪ್ರಾಧಿಕಾರದಿಂದ ಪರವಾನಗಿ ಪಡೆದ ಖಾಸಗಿ ರಸಗೊಬ್ಬರ ಮಿಶ್ರಣ ಘಟಕಗಳಿಗೆ ಅಥವಾ ಸರ್ಕಾರಿ ಬೀಜೋತ್ಪಾದನಾ ಕೇಂದ್ರಗಳಿಗೆ ಅಥವಾ ಕೃಷಿ ಸಂಶೋಧನಾ ಕೇಂದ್ರಗಳಿಗೆ ಮಾರಾಟ ಮಾಡಲು ಅವಕಾಶವಿದೆ.
ಈ ಪದಾರ್ಥವನ್ನು ಇರುವ ಸ್ಥಳದಿಂದಲೇ ಇರುವ ಸ್ಥಿತಿಯಲ್ಲಿಯೇ ಖರೀದಿಸಲು ಆಸಕ್ತಿಯಿರುವ ಸಕ್ಷಮ ಪ್ರಾಧಿಕಾರದಿಂದ ಪರವಾನಗಿ ಪಡೆದ ಖಾಸಗಿ ರಸಗೊಬ್ಬರ ಮಿಶ್ರಣ ಘಟಕಗಳು/ ಸರ್ಕಾರಿ ಬೀಜೋತ್ಪಾದನಾ ಕೇಂದ್ರಗಳು/ ಕೃಷಿ ಸಂಶೋಧನಾ ಕೇಂದ್ರಗಳು ಮಾತ್ರ ಆಗಸ್ಟ್, 07 ರೊಳಗೆ ತಮ್ಮ ಇಚ್ಛಾ ಪತ್ರವನ್ನು ಸೂಕ್ತ ದಾಖಲಾತಿಗಳೊಂದಿಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೆಎಸ್‍ಎಫ್‍ಸಿ ಕಟ್ಟಡ, ಇಂಡಸ್ಟ್ರೀಯಲ್ ಏರಿಯಾ, ಮಡಿಕೇರಿ ಇಲ್ಲಿಗೆ ಖುದ್ದಾಗಿ ಅಥವಾ ಇ-ಮೇಲೆ ವಿಳಾಸ jdagrimadikeri@gmail.com ಕ್ಕೆ ಸಲ್ಲಿಸಲು ಕೋರಿದೆ. ಹೆಚ್ಚಿನ ಮಾಹಿತಿಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
What's Your Reaction?
Like
0
Dislike
0
Love
1
Funny
0
Angry
0
Sad
0
Wow
0
