ಪಡಿತರ ಚೀಟಿದಾರರ ಗಮನಕ್ಕೆ

Aug 3, 2026 - 17:31
 0  832
ಪಡಿತರ ಚೀಟಿದಾರರ ಗಮನಕ್ಕೆ

ಮಡಿಕೇರಿ ಆ.03:-ಕೇಂದ್ರ ಸರ್ಕಾರವು ದೇಶದಲ್ಲಿ ಮುಂಬರುವ ಖರೀದಿ ಋತುವಿನಲ್ಲಿ ಮತ್ತು ಪರಿಣಾಮಕಾರಿ ಲಾಜಿಸ್ಟಿಕ್ಸ್ ಮತ್ತು ಸಂಗ್ರಹಣೆಗಾಗಿ ರಾಜ್ಯಗಳು ಎದುರಿಸುತ್ತಿರುವ ಅಡಚಣೆಗಳಿಂದಾಗಿ ಎನ್‍ಎಫ್‍ಎಸ್‍ಎ ಅಡಿಯಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್-2026 ರ ಎರಡು ಮಾಹೆಗಳ ಅಹಾರಧಾನ್ಯ ಹಂಚಿಕೆಯನ್ನು ಎತ್ತುವಳಿ ಮಾಡಿ ಆಗಸ್ಟ್-2026ರ ಮಾಹೆಯಲ್ಲಿಯೇ ವಿತರಣೆ ಮಾಡುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. 

ಈ ಪ್ರಯುಕ್ತ ಆಗಸ್ಟ್-2026 ಮತ್ತು ಸೆಪ್ಟೆಂಬರ್-2026 ಈ ಎರಡು ಮಾಹೆಗಳ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‍ಎಫ್‍ಎಸ್‍ಎ) ಹಂಚಿಕೆಯನ್ನು ಆಗಸ್ಟ್-2026 ರ ಮಾಹೆಯಲ್ಲಿ ವಿತರಿಸಲು ಸರ್ಕಾರವು ನಿರ್ದೇಶನ ನೀಡಿರುತ್ತದೆ.

ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಪ್ರತಿ ಅಂತ್ಯೋದಯ (ಎಎವೈ) ಪಡಿತರ ಚೀಟಿಗೆ 70 ಕೆ.ಜಿ (ಆಗಸ್ಟ್-35 + ಸೆಪ್ಟೆಂಬರ್-35) ಅಕ್ಕಿ ಮತ್ತು ಪಿಎಚ್‍ಎಚ್(ಬಿಪಿಎಲ್) ಪಡಿತರ ಚೀಟಿ ಕುಟುಂಬದಲ್ಲಿನ ಪ್ರತೀ ಸದಸ್ಯರಿಗೆ 10 ಕೆ.ಜಿ (ಆಗಸ್ಟ್-5+ಸೆಪ್ಟೆಂಬರ್-5) ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತದೆ. ಆಗಸ್ಟ್ ಮತ್ತು ಸೆಪ್ಟೆಂಬರ್ 2026 ಈ ಎರಡು ಮಾಹೆಗಳ ಆಹಾರಧಾನ್ಯವನ್ನು ಒಟ್ಟಿಗೆ ವಿತರಣೆ ಮಾಡಬೇಕಿದ್ದು, ವಿತರಣಾ ಸಂದರ್ಭದಲ್ಲಿ ಪ್ರತಿ ಮಾಹೆಯ ಪಡಿತರ ವಿತರಣೆಗೆ ಫಲಾನುಭವಿಗಳಿಂದ ಪ್ರತ್ಯೇಕ ಬಯೋ ಮೆಟ್ರಿಕ್ ಪಡೆಯುವ ಅವಕಾಶ ಕಲ್ಪಿಸಿದ್ದು, ಪಡಿತರ ಚೀಟಿ ಫಲಾನುಭವಿಗಳು ಎರಡು ಬಾರಿ ಬಯೋ ಮೆಟ್ರಿಕ್ ನೀಡಿ ಆಹಾರ ಧಾನ್ಯ ಪಡೆಯಲು ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರಿಗೆ ತಿಳಿಯಪಡಿಸಿದೆ.

ಈ ಯೋಜನೆಯಡಿ ವಿತರಿಸಲಾದ ಆಹಾರ ಧಾನ್ಯಗಳನ್ನು ಹಣಕ್ಕಾಗಿ ಪಡಿತರ ಚೀಟಿದಾರರು ಮಾರಾಟ ಮಾಡುವುದಾಗಲಿ ಅಥವಾ ಸಂಗ್ರಹಣೆ ಮಾಡುವುದು ಕಂಡುಬಂದಲ್ಲಿ ಅಂತಹ ಪಡಿತರ ಚೀಟಿದಾರರಿಗೆ ವಿತರಿಸಲಾದ ಆಹಾರ ಧಾನ್ಯಗಳಿಗೆ ಮುಕ್ತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ದಂಡ ವಿಧಿಸಲಾಗುವುದು ಮತ್ತು ಈ ಪಡಿತರ ಚೀಟಿಯನ್ನು ಆರು ತಿಂಗಳ ಅವಧಿಗೆ ಅಮಾನತ್ತುಗೊಳಿಸಲಾವುದು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಎಚ್ಚರಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0