ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ

Dec 1, 2025 - 23:54
Dec 1, 2025 - 23:54
 0  535
ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ

ಸಿದ್ದಾಪುರ:- ಸುಳ್ಯದಲ್ಲಿ ನಡೆದ ಇಂಪ್ಯಾಕ್ಟ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ಅವರು ಆಯೋಜಿಸಿದ ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಚಾಂಪಿನ್ಶಿಪ್ 2025 , ಅಮ್ಮತಿಯ ಶಿಟೋರಿಯೋ ಸ್ಕೂಲ್ ತರಬೇತಿದಾರರಾದ ಪ್ರಸನ್ನರವರ ಮಾರ್ಗದರ್ಶನದಲ್ಲಿ 10 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿ ಕಟಾ ಹಾಗೂ ಕುಮಿತೇ ವಿಭಾಗದಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ, ಹಾಗೂ ಟ್ರೋಫಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕುಮಿಟೆ ವಿಭಾಗದಲ್ಲಿ ಭವ್ಯ ಹಾಗೂ, ದಿಯಾ ಸುನಿಲ್ (ಚಿನ್ನ),ಅನನ್ಯ ಸುಬೀಶ್ , ಪ್ರಣಂ ತಿಮ್ಮಯ್ಯ ಶಿವಾಲಿ ( ಬೆಳ್ಳಿ) ,ಶ್ರೇಯನ್ ಅನುದೇವ್ ಕಂಚಿನ ಪದಕ ಪಡೆಯುವ ಮೂಲಕ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದು ಟ್ರೋಫಿಯನ್ನು ಗಳಿಸಿದ್ದಾರೆ. ಕಟಾ ವಿಭಾಗದಲ್ಲಿ ಭವ್ಯ ,ಎಬೆನ್. ಕೆ. ಜಾನ್ಫ್ರೆಡ್, ಮುತ್ತಪ್ಪ , ಶಿವಾಲಿ , ಶ್ರಯನ್ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಅನನ್ಯ ಸುಬೀಶ್,ದಿಯಾ ಸುನಿಲ್ ಬೆಳ್ಳಿಪದಕ ಪಡೆದು ದ್ವಿತೀಯ ಹಾಗೂ ಅನುದೇವ್,ಪ್ರಣಮ್ ತಿಮ್ಮಯ್ಯ ಕಂಚಿನ ಪದಕ ಪಡೆದು ತೃತೀಯ ಸ್ಥಾನಗಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0