ಆಯುಧ ಪೂಜಾ ಹಾಗೂ ಮಡಿಕೇರಿ ದಸರಾ ಜನೋತ್ಸವ: ವಿವಿಧೆಡೆ ಮದ್ಯಮಾರಾಟ ನಿಷೇಧ

ಆಯುಧ ಪೂಜಾ ಹಾಗೂ ಮಡಿಕೇರಿ ದಸರಾ ಜನೋತ್ಸವ:  ವಿವಿಧೆಡೆ ಮದ್ಯಮಾರಾಟ ನಿಷೇಧ

ಮಡಿಕೇರಿ:02-10-2025 ರಂದು ಮಡಿಕೇರಿ ನಗರದಲ್ಲಿ ನಡೆಯಲಿರುವ ದಸರಾ ಉತ್ಸವದ ಸಂಬಂಧ ದಿನಾಂಕ 02-10-2025 ರಂದು ರಾತ್ರಿ ಮಡಿಕೇರಿ ನಗರದ ಹತ್ತು ದೇವಸ್ಥಾನಗಳ ವತಿಯಿಂದ ದಶ ಮಂಟಪಗಳ ಮೆರವಣಿಗೆಯು ಮಡಿಕೇರಿ ನಗರದ ಮುಖ್ಯ ಬೀದಿಗಳಲ್ಲಿ ನಡೆಯಲಿದೆ.

ಈ ಸಂಬಂಧ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದಿನಾಂಕ 01-10-2025 ರಂದು ಸಮಯ ಬೆಳಿಗ್ಗೆ 06.00 ಗಂಟೆಯಿಂದ ಮಧ್ಯ ರಾತ್ರಿ 12.00 ಗಂಟೆಯವರೆಗೆ, ಸುಂಟಿಕೊಪ್ಪ, ಕೊಡಗರಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲು ಮತ್ತು ಸುಂಟಿಕೊಪ್ಪ ಗ್ರಾಮ ಪಂಚಾಯತಿಗೆ ಸೇರಿದ ವಾಹನ ಚಾಲಕರ ಸಂಘ (ರಿ), ಸುಂಟಿಕೊಪ್ಪ ರವರ ವತಿಯಿಂದ 55ನೇ ವಾರ್ಷಿಕೋತ್ಸವ ಮತ್ತು ಆಯುಧ ಪೂಜಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಂಗೀತ ರಸಮಂಜರಿ ಹಾಗೂ ವಿವಿಧ ಮನೋರಂಜನೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 2500 ದಿಂದ 3000 ಜನ ಪಾಲ್ಗೊಳ್ಳಲಿರುವ ಬಗ್ಗೆ ಮಾಹಿತಿ ಇರುತ್ತದೆ.

ದಿನಾಂಕ 03-10-2025 ರಂದು ಸಮಯ ಬೆಳಿಗ್ಗೆ 06.00 ಗಂಟೆಯಿಂದ ಸಂಜೆ 05.00 ಗಂಟೆಯವರೆಗೆ ಮಡಿಕೇರಿ ನಗರ ಠಾಣಾ ಸುತ್ತಮುತ್ತಲಿನ 5. ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಲು ಪೊಲೀಸ್ ಅಧೀಕ್ಷಕಕರು, ಕೊಡಗು ಜಿಲ್ಲೆ, ಮಡಿಕೇರಿ ರವರು ಕೋರಿದ್ದಾರೆ.. ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಸದರಿ ದಿನಾಂಕದಂದು ಮದ್ಯ ಮಾರಾಟವನ್ನು ನಿಷೇಧಿಸುವುದು ಸೂಕ್ತವೆಂದು ಕಂಡುಬಂದ ಕಾರಣ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.