ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಬಿಸಿಎ ವಿದ್ಯಾರ್ಥಿನಿ ಅರೆಸ್ಟ್; 35ಲಕ್ಷ ರೂ‌. ಮೌಲ್ಯದ ಗಾಂಜಾ ವಶಕ್ಕೆ

May 13, 2026 - 14:23
 0  2.7k
ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಬಿಸಿಎ ವಿದ್ಯಾರ್ಥಿನಿ ಅರೆಸ್ಟ್; 35ಲಕ್ಷ ರೂ‌. ಮೌಲ್ಯದ ಗಾಂಜಾ ವಶಕ್ಕೆ

ಮಂಗಳೂರು:ಹೈಡ್ರೊವಿಡ್ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಬಿಸಿಎ ವಿದ್ಯಾರ್ಥಿನಿಯನ್ನು ಬಂಧಿಸಿರುವ ಪೊಲೀಸರು 35ಲಕ್ಷ ರೂ‌. ಮೌಲ್ಯದ 1.42ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

 ಶಿವಮೊಗ್ಗ ಜಿಲ್ಲೆಯ ಸಾಗರ ನಿವಾಸಿ, ಸದ್ಯ ಕುಂದಾಪುರ ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಸುಹಾನ(21) ಬಂಧಿತ ಆರೋಪಿ.

 ಮೇ 12ರಂದು ಮಾರಾಟ ಮಾಡಲೆಂದು ಸುಹಾನ ಹೈಡ್ರೊವಿಡ್ ಗಾಂಜಾವನ್ನು ಸಾಗಿಸುತ್ತಿದ್ದಳು. ಖಚಿತ ಮಾಹಿತಿಯ ಮೇರೆಗೆ ಪಣಂಬೂರು ಎಸಿಪಿ ತಂಡ ಹಾಗೂ ಮುಲ್ಕಿ ಠಾಣೆಯ ಪೊಲೀಸರು ತಂಡ ಕಾರ್ಯಾಚರಣೆ ನಡೆಸಿ ಮಂಗಳೂರು ನಗರದ ಮುಲ್ಕಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ದಾಳಿ ನಡೆಸಿ ಆಕೆಯನ್ನು ವಶಕ್ಕೆ ಪಡೆದು ಅವಳಲ್ಲಿದ್ದ ಸುಮಾರು 35,00,000/- ರೂ ಮೌಲ್ಯದ ಸುಮಾರು 1 ಕೆಜಿ 42 ಗ್ರಾಮ್ ಹೈಡ್ರೊವಿಡ್ ಗಾಂಜಾ ಮಾದಕದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಮತ್ತು ಇತರ ಸೊತ್ತು ವಶಪಡಿಸಿಕೊಳ್ಳಲಾಗಿದೆ.

 ಈ ಮಾದಕದ್ರವ್ಯವನ್ನು ಆರೋಪಿತೆ ಚೆನ್ನೈನಿಂದ ತರಿಸಿಕೊಂಡು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದಳು ಎಂದು ತಿಳಿದು ಬಂದಿರುತ್ತದೆ.

ಆರೋಪಿತೆಯ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 32/2026 ಕಲಂ: 8(ಸಿ), 20(ಬಿ) ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿತೆಯ ಮೇಲೆ ಈ ಕೆಳಗಿನಂತೆ ಪ್ರಕರಣಗಳು ದಾಖಲಾಗಿರುತ್ತದೆ . 1) ಕಾವೂರು ಪೊಲೀಸ್ ಠಾಣಾ ಅ. ಕ್ರ 37/2026 ಕಲಂ: 8(C), 22(C) NDPS Act. 2) ಬೆಂಗಳೂರು ಅಂತರಾಷ್ಟ್ರೀಯ ವಿಮಾನ ಕಸ್ಟಮ್ O. R No: 177/2025-26 U/S 20(b), 2(B), 23(b), 27(A) & 29 NDPS Act.

What's Your Reaction?

Like Like 1
Dislike Dislike 1
Love Love 2
Funny Funny 0
Angry Angry 2
Sad Sad 2
Wow Wow 1