ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ ಬಿ.ರಿಪೋರ್ಟ್ ಸಲ್ಲಿಕೆ: ಶಾಸಕ ಎ.ಎಸ್ ಪೊನ್ನಣ್ಣ ಅವರು ಏನಂದ್ರು ಗೊತ್ತೇ!!
admincoorgdaily
ಮಡಿಕೇರಿ:ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದ ತನಿಖಾ ವರದಿಗೆ ಬಿ ರಿಪೋರ್ಟ್ ನೀಡಲಾಗಿದೆ. ಪ್ರಕರಣದಲ್ಲಿ ಎ.ಎಸ್ ಪೊನ್ನಣ್ಣ ,ಡಾ.ಮಂತರ್ ಗೌಡ ಹಾಗೂ ತೆನ್ನೀರಾ ಮೈನಾ ಅವರ ಪಾತ್ರ ಇದೆ ಎಂಬ ಆರೋಪ ನಿರಾಧಾರ ಎಂಬುದು ಸಾಬೀತಾಗಿದೆ ಎಂದು ಮಡಿಕೇರಿಯಲ್ಲಿ ಶಾಸಕ ಪೊನ್ನಣ್ಣ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಎ.ಎಸ್ ಪೊನ್ನಣ್ಣ, ಬಿಜೆಪಿ ರಾಜ್ಯ ನಾಯಕರು ಸೇರಿದಂತೆ ಜಿಲ್ಲಾ ಮುಖಂಡರು ವಿನಯ್ ಸಾವಿನಲ್ಲೂ ರಾಜಕೀಯ ಮಾಡಿದರು. ಸಾವಿನಲ್ಲೂ ರಾಜಕೀಯ ಮಾಡಿದ ಬಿಜೆಪಿ ನಾಯಕರು ಕ್ಷಮೆ ಕೇಳಲಿ. ಮೃತ ವಿನಯ್ ಕುಟುಂಬಸ್ಥರ ಜೊತೆ ನಿಲ್ಲದ ಬಿಜೆಪಿ ನಾಯಕರು ಸಾವಿನಲ್ಲೂ ರಾಜಕೀಯ ಮಾಡಿ ತೆರಳಿದರು. ಇದೀಗ ಮೃತ ವಿನಯ್ ಕುಟುಂಬಕ್ಕೆ ಅಗತ್ಯ ಸಹಕಾರ ನಾನೇ ಮಾಡಬೇಕು ಎಂದು ಶಾಸಕ ಎ.ಎಸ್ ಪೊನ್ನಣ್ಣ ಹೇಳಿದರು.